Buffalo’s Rescued: ಬೃಹತ್ ಕಂಟೇನರ್ ನಲ್ಲಿ 32 ಕೋಣಗಳು.! ಮೂರು ಜನ ಕಟುಕರ ಕೈಗೆ ಕೋಳ
ಹೊಸನಗರ: ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿಯ ಹುಲಿಕಲ್ ನಲ್ಲಿ ಕೋಣಗಳನ್ನು ಸಾಗಿಸುತಿದ್ದ ಕಂಟೇನರ್ ಭಾನುವಾರ ವಶಕ್ಕೆ ಪಡೆಯಲಾಗಿದೆ.
ಅಂದಾಜು ಲಕ್ಷಾಂತರ ಮೌಲ್ಯದ 32 ಕೋಣಗಳನ್ನು ಜಪ್ತಿ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ದಾವಣಗೆರೆಯ ಇಮ್ರಾನ್, ಬೆಳಗಾವಿಯ ಮುದ್ದಿಬಸವನ ಗ್ರಾಮದ ಮೊಹಮ್ಮದ್ ಗೌಸ್, ಹರಿಹರದ ಗಂಗನರಸಿ ಗ್ರಾಮದ ಮೆಹಬೂಬ್ ಎಂಬುವವರನ್ನು ಬಂಧಿಸಲಾಗಿದೆ.
ದಾಖಲೆಗಳಿಲ್ಲದೇ ಕೋಣಗಳ ಸಾಗಾಟ ಮಾಡುತ್ತಿದ್ದು ಯಾವುದೇ ಸೂಕ್ತ ದಾಖಲೆಗಳು ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಉಡುಪಿ, ಮಂಗಳೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿರಬಹುದು ಎಂಬ ಗುಮಾನಿ ಇದೆ ಅಂತಾ ತಿಳಿದುಬಂದಿದೆ. ಹುಲಿಕಲ್ ಬಳಿ ಪೊಲಿಸರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆ, ವಾಹನ ತಡೆದು ಪರಿಶೀಲನೆ ಮಾಡಿದಾಗ ಕಂಟೇನರ್ ನಲ್ಲಿ ಕೋಣ ಗಳಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಕೋಣಗಳನ್ನ ಹಿಂಸೆಯ ರೂಪದಲ್ಲಿ ಕಟ್ಟಲಾಗಿತ್ತು. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.