ದಾವಣಗೆರೆ: ದಾವಣಗೆರೆ ನಗರದ ವಿನೋಬನಗರದ 2ನೇ ಮೇನ್, 14ನೇ ಕ್ರಾಸ್‌ನಲ್ಲಿನ ಮೊದಲನೇ ಮಹಡಿಯಲ್ಲಿರುವ ಡೋರ್ ನಂ.3999/14ರ ಕೋಣೆಯಲ್ಲಿ ಗಿರೀಶ್ ವೈ.ಎಂ. ಇತರರು ಸೇರಿಕೊಂಡು ಕೇರಂ ಜೂಜಾಟ ಆಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಪೊಲೀಸರು 19 ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ 1.60 ಲಕ್ಷ ರೂ. ನಗದು ಹಣ, 4 ಕೇರಂ ಬೋರ್ಡ್ ಹಾಗೂ ಆಟದ ಪರಿಕರಗಳನ್ನು ವಶ ಪಡಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಇಲ್ಲಿ ಕೇರಂ ಆಟದ ಕ್ಲಬ್ ಎಂದು ಪರವಾನಿಗೆ ಪಡೆದು ಹಣವನ್ನ ಪಣವಾಗಿ ಕಟ್ಟಿ ಜೂಜಾಟ ಆಡಿಸುತ್ತಿದ್ದರಂತೆ, ಈ ಬಗ್ಗೆ ಹಲವು ದೂರುಗಳು ನೀಡಿದ್ದರು ಈ ಹಿಂಎ ಯಾರೂ ಕ್ರಮ ಕೈಗೊಂಡಿದ್ದಿಲ್ಲವಂತೆ.
ದಾವಣಗೆರೆ ನಗರ ಡಿ ವೈ ಎಸ್ ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ಬಡಾವಣೆ ಠಾಣೆ ಇನ್ಸ್‌ಪೆಕ್ಟರ್ ಧನಂಜಯ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದಾಗ ಜೂಜಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಒಟ್ಟಾರ ದಾವಣಗೆರೆ ನಗರದಲ್ಲಿ ಇನ್ನೂ ಹತ್ತಾರು ಅಕ್ರಮ ದಂಧೆಗಳು ಕೆಲ ಪೋಲಿಸರ ಗಮನಕ್ಕಿದ್ದರೂ ಮೇಲಾಧಿಕಾರಿಗಳಿಗೆ ದಾರಿ ತಪ್ಪಿಸಿರುವ ಹಲವು ಉದಾಹರಣೆ ಇವೆ ಎಂಬುದು ಸಾರ್ವಜನಿಕ ವಲಯದಲ್ಲಿ ಮಾತಾಗಿದೆ. ಇನ್ನಾದರೂ ಅಕ್ರಮಗಳನ್ನ ಪತ್ತೆಹಚ್ಚಿ ದಂಗೆಕೋರರ ಎಡೆಮುರಿ ಕಟ್ಟಬೇಕು ಎಂದು ಎಲ್ಲರ ಒತ್ತಾಸೆಯಾಗಿದೆ.
