ದಾವಣಗೆರೆ ಸ್ಮಾರ್ಟ್ ಸಿಟಿಯ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಸಿಸಿ ಕ್ಯಾಮೆರಾಗಳು ವರ್ಕ್ ಆಗುತ್ತಾ.!?

ದಾವಣಗೆರೆ: ಬಡಪಾಯಿ ಸಾರ್ವಜನಿಕರು ಹೆಲ್ಮೆಟ್ ಹಾಕಿಲ್ಲ, ಸಿಗ್ನಲ್ಲ ಜಂಪ್, ಟ್ರಿಪಲ್ ರೈಡಿಂಗ್ ಅಂತಾ ಇಲ್ಲಸಲ್ಲದ ಸಾರಿಗೆ ನಿಯಮ ಉಲ್ಲಂಘನೆ ಆರೋಪದಡಿ 15 – 20 ಸಾವಿರ ದಂಡ ಹಾಕುತ್ತಾರೆ. ಅದರಲ್ಲೂ ಒಮ್ಮೆಲೆ ಹತ್ತಾರು ಸಾವಿರ ಹಣ ಕಟ್ಟಿ ಅಂತಾ ಬಡಪಾಯಿಗಳಿಂದ ದಂಡ ಕಟ್ಟಿಸಿಕೊಳ್ಳುವ ನಮ್ಮ ಅಧಿಕಾರಿಗಳು ಇಂದು ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಲಾಗುತ್ತಿದೆ.
ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ನಗರದ ಪ್ರಮುಖ ವೃತ್ತದಲ್ಲಿ ಸಿಸಿ ಕ್ಯಾಮೆರಾ ಗಳನ್ನ ಅಳವಡಿಸಲಾಗಿದ್ದು, ಅದರಿಂದ ಕಮಾಂಡ್ ಕಂಟ್ರೋಲ್ ರೂಮಿನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ನೋಟಿಸ್ ಕಳಿಸುವ ಯೋಜನೆ ಇದೆ. ಆದ್ರೆ ಅದೂ ಕೂಡ ಕೇವಲ ಬಡಪಾಯಿ ಸಾರ್ವಜನಿಕರ ವಾಹನಗಳನ್ನು ಮಾತ್ರ ಗುರುತಿಸಿ ದಂಡ ಹಾಕುವ ವಿಶೇಷ ರೀತಿಯ ಸೌಲಭ್ಯವನ್ನು ಹೊಂದಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ..?
ಇಂದು ಬಿಜೆಪಿ ಮುಖಂಡರು ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ನಗರದ ಪ್ರಮುಖ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹೆಲ್ಮೆಟ್ ಇಲ್ಲದೆ ಸಂಚರಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನ ನೋಡಿದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರು ಇಂತಹ ಪ್ರಶ್ನೆಗಳನ್ನು ಸಂಬಂಧಿಸಿದವರಿಗೆ ಕೇಳಿದ್ದಾರೆ.
ಕೆ.ಎಲ್.ಹರೀಶ್ ಬಸಾಪುರ.