ಹುಟ್ಟು ಹಬ್ಬಗಳನ್ನ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಿ ಅರ್ಥವಾಗಿ ಆಚರಿಸಿ – ಯುವ ಮುಖಂಡ ಪರಶುರಾಮ ಹರ್ಲಾಪುರ

IMG-20211225-WA0006

 

ಹಾವೇರಿ : ಹುಟ್ಟು ಹಬ್ಬಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆಗೆ ಮುಂದಾದರೆ ಸಂತೋಷ ನೆಮ್ಮದಿಗೆ ಸಹಕಾರಿಯಾಗಲಿದೆ ಎಂದು ಯುವ ಮುಖಂಡರಾದ ಪರಶುರಾಮ ಹರ್ಲಾಪುರ ಹೇಳಿದರು.

ಇಲ್ಲಿನ ಉದಯನಗರದಲ್ಲಿನ ಶ್ರೀ ಶಕ್ತಿ ತೆರೆದ ತಂಗುದಾಣದ ವಿದ್ಯಾರ್ಥಿಗಳಿಗೆ ತಮ್ಮ ಹುಟ್ಟು ಹಬ್ಬ ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಭಾರತರತ್ನ ಡಾ.ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬದ ನಿಮಿತ್ತ ಕಲಿಕಾ ಉಪಕರಣಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ನಾವೆಲ್ಲರೂ ಸಂತೋಷವನ್ನು ಬೆರೆಡೆ ಹುಡುತ್ತಾ ಹೋಗುವ ಬದಲು ಶೈಕ್ಷಣಿಕವಾಗಿ ಉತ್ತಮ ಕಾರ್ಯ ಮಾಡಿದರೆ ನೆಮ್ಮದಿ ಬದುಕು ನಮ್ಮದಾಗಲಿದೆ.ಇವತ್ತು ನನ್ನ ಹುಟ್ಟು ಹಬ್ಬಕ್ಕಿಂತ ಭಾರತ ಮಾತೆಯ ಪುತ್ರರಾಗಿ ದೇಶಕ್ಕಾಗಿಯೇ ತಮ್ಮ ಜೀವನವನ್ನು ಶ್ರಮಿಸಿದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬ ಆಚರಣೆ ನಮಗೆ ತುಂಬಾ ಖುಷಿ ನೀಡುತ್ತಿದೆ.ಪ್ರತಿ ವರ್ಷವೂ ನಾವು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ ಎಂದು ಕಲಿಕಾ ಉಪಕರಣಗಳನ್ನು ವಿತರಣೆ ಮಾಡುತ್ತಿದ್ದು,ಮಹಾನ್ ನಾಯಕರ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳ ಜನ್ಮ ದಿನ ಆಚರಣೆ ದಿನ ಅವರ ತತ್ವ ಸಿದ್ದಾಂತ ಹಾಗೂ ಅವರ ಬದುಕಿನ ಬಗ್ಗೆ ತಿಳಿದುಕೊಂಡು ಅವರ ಮಾರ್ಗದರ್ಶನದಲ್ಲಿ ಮುಂದಾಗೋಣ. ಈ ದಿನ ತುಂಬಾ ಸಂತೋಷಕರ ದಿನವಾಗಲಿ ಎಲ್ಲರಿಗೂ ದೇವರು ಒಳಿತು ಮಾಡಲಿ ಎಂದು ಪರಶುರಾಮ ಹರ್ಲಾಪುರ ಹೇಳಿದರು.

ತಂಗುದಾಣದ ಯೋಜನಾ ಸಂಯೋಜಕರಾದ ಪುಟ್ಟಪ್ಪ ಎಂ ಎಚ್ ಮಾತನಾಡಿ ಕಲಿಕಾ ಉಪಕರಣಗಳನ್ನು ನೀಡಿರುವುದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಅವರಿಗೆ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ
ಸದಸ್ಯರಾದ ನಿಂಗಪ್ಪ ಎಂ ಆರೇರ.ಶ್ರೀಮತಿ ಹೇಮಾವತಿ ಹರ್ಲಾಪುರ. ಇಂಜಿನಿಯರಾದ ಪ್ರಕಾಶ ಗೌಡ್ರ. ಶಶಿಧರ.ಮಧು.ಗಣೇಶ ಸೇರಿದಂತೆ ತಂಗುದಾಣದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!