ದಾವಣಗೆರೆಯಲ್ಲಿ ಗಂಗಾಮತ ಸಮಾಜದಿಂದ ಗಂಗಾ ಪರಮೇಶ್ವರಿ ಜಯಂತಿ ಆಚರಣೆ

ದಾವಣಗೆರೆ: ಗಂಗಾಮತ ಸಮಾಜ ಬಾಂಧವರು ಶುಕ್ರವಾರ ನಗರದಲ್ಲಿ ಶ್ರೀ ಗಂಗಾ ಪರಮೇಶ್ವರಿ ಜಯಂತಿಯನ್ನು ಶ್ರದ್ಧಾ, ಭಕ್ತಿಗಳಿಂದ ಆಚರಿಸಿದರು.

ಜಿಲ್ಲಾ ಗಂಗಾಮತಸ್ಥರ ಸಂಘ ಹಾಗೂ ಶ್ರೀ ಗಂಗಾಪರಮೇಶ್ವರಿ ಜಯಂತ್ಯೋತ್ಸವ ಸಮಿತಿ ವತಿಯಿಂದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಸಮೀಪ ಪಾದಗಟ್ಟೆಯಲ್ಲಿ ಹಮ್ಮಿಕೊಂಡಿದ್ದ ಗಂಗಾ ಪರಮೇಶ್ವರಿ ಜಯಂತ್ಯೋತ್ಸವದಲ್ಲಿ ಸಮಾಜದ ನೂರಾರು ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಜಯ್ಯಮ್ಮ ಗೋಪಿನಾಯ್ಕ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಅನೇಕರು ಶ್ರೀ ಗಂಗಾ ಪರಮೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಜಯಂತಿ ನಿಮಿತ್ತ ಮಹಿಳೆಯರಿಂದ ಕುಂಭಮೇಳ ನಡೆಯಿತು. ಕುಂಭಗಳನ್ನು ಹೊತ್ತಿದ್ದ 101 ಮಹಿಳೆಯರು ದುರ್ಗಾಂಬಿಕಾ ದೇವಸ್ಥಾನದಿಂದ ಹೊಂಡದ ಸರ್ಕಲ್‌ವರೆಗೂ ಶ್ರದ್ಧಾ ಭಕ್ತಿಯಿಂದ ಸಾಗಿ ಪುನೀತಭಾವ ತಾಳಿದರು.ಸಮಾಜದ ಹಿರಿಯರು, ಮಕ್ಕಳು, ಮಹಿಳೆಯರು ಕುಂಭಮೇಳದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಗಂಗಾಮತಸ್ಥ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ಕರ‍್ಯದರ್ಶಿ ಉಮೇಶ್, ಉಪಾಧ್ಯಕ್ಷ ಪುಟಗನಾಳ್ ಮಂಜುನಾಥ್, ಅಂಬಾಡಿ ನಾಗರಾಜ್, ವಾಗೀಶ್, ಚಂದ್ರಪ್ಪ, ಲಿಂಗರಾಜ್ ಹಾವನೂರು, ಗಂಗಣ್ಣ, ಗಣೇಶ್, ರವಿಕುಮಾರ್,ಬಾತಿ ಅಂಜಿನಪ್ಪ, ಕೆಂಚಪ್ಪ, ಕೋಲ್ಕುಂಟೆ ಅಶೋಕ್, ಚಂದ್ರಪ್ಪ, ಹನುಮಂತ, ದುಗ್ಗೇಶ್ ಸೇರಿದಂತೆ ಸಮಾಜದ ನೂರಾರು ಭಕ್ತರು ಉಪಸ್ಥಿತರಿದ್ದರು.

ಶಿರಮಗೊಂಡನಹಳ್ಳಿಯಲ್ಲಿ ಪೂಜೆ; ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲೂ ಕೂಡ Ä ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಆಚರಿಸಲಾಯಿತು. ಮಳೆ, ಬೆಳೆ ಸಮೃದ್ಧಿಯಾಗಿ ರೈತರ ಜೀವನ ಹಸನಾಗಲೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.

ಸಮಾಜದ ಹಿರಿಯರಾದ ಜಯಪ್ಪ, ಶಿವಮೂರ್ತಿ, ಭಾರತಿ ಮಾಲತೇಶ, ರೇಣುಕಾ ಮೋಹನ್‌ಕುಮಾರ್, ಸುಷ್ಮಾ ಮಂಜುನಾಥ್, ಸವಿತಾ ಹನುಮಂತಪ್ಪ, ಮಾಲತಿ ಪ್ರಕಾಶ್, ಪ್ರೇಮಾ ಮಲ್ಲಿಕಾರ್ಜುನ್, ಸರಿತಾ ಉಮೇಶ್, ರೇಣುಕಾ ಹನುಮಂತ, ಮಾನಸ ಭಾಸ್ಕರ್, ಪ್ರೀತಿ ಲಕ್ಷ÷್ಮಣ. ವಾಣಿಶ್ರೀ ಚಂದ್ರಶೇಖರ್, ಮಧು ಲಿಖಿತಾ ಮತ್ತು ಪ್ರಮುಖರಾದ ರಮೇಶ್‌ಚಂದ್ರ ಬಾಬು, ಕೆ.ರಮೇಶ್, ಕೆ ಮಲ್ಲಪ್ಪ, ಕೆಎಂ ಮಂಜುನಾಥ್, ಮಾಲತೇಶ್ ಕೆಎಂ. ಮನೋಜ್, ಗಜೇಂದ್ರ, ಅಭಿಷೇಕ್, ರಾಜು ವೆಲ್ಡಿಂಗ್‌ಶಾಪ್, ಮಂಜುನಾಥ್ ಜರಕಟ್ಟೆ, ಮಂಜುನಾಥ್ ಕೆ. ಮಾಂತೇಶ ಗೊರಪ್ಪರ, ಉಮೇಶ್ ಜೆ. ವಕೀಲರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!