ಸಂಕ್ರಾಂತಿಯ ಸಂಭ್ರಮ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲೀ..

ದಾವಣಗೆರೆ: ಸಂಕ್ರಾಂತಿ 2023 ನೇ ವರ್ಷದ ಮೊದಲ ಹಬ್ಬವಾಗಿದೆ, ಮತ್ತು ನಾಡಿನಾದ್ಯಂತ ಆಚರಿಸಲಾಗುತ್ತದೆ. ಇದನ್ನು ಸುಗ್ಗಿಹಬ್ಬವೆಂದು ಸಹ ಕರೆಯುತ್ತಾರೆ. ಎಳ್ಳಿನಂತೆ ಶುದ್ದ ಜೀವನ ಇರಲಿ ಬೆಲ್ಲದಂತೆ ಸವಿ ಬಾಳು ನಮ್ಮದಾಗಲಿ ಎಂದು ಎಳ್ಳು ಬೆಲ್ಲ (ಸಕ್ಕರೆ) ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ,ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡುವುದರ ಜೊತೆಗೆ ಎಲ್ಲಾ ಮಕ್ಕಳು ತಮ್ಮ ಆಪ್ತರು ನೆರೆ ಹೊರೆಯವರಿಗೆ ವಿಶೇಷ ಸಿಹಿಯನ್ನು ಹಂಚಿ ಹಬ್ಬವನ್ನು ಎಲ್ಲರೊಂದಿಗೆ ಮತ್ತು ಮನೆಯಲ್ಲಿ ಸುಖ ಸಂತೋಷದಿಂದ ಸಂಭ್ರಮಿಸುತ್ತಾರೆ.

ಮಕರ ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತದೆ. ಇದು ಧಾರ್ಮಿಕವಾಗಿ, ಸಾಂಸ್ಕೃತಿಕ ಹಬ್ಬ. ಕರ್ನಾಟಕದಲ್ಲಿ ಮಕರ ಸಂಕ್ರಾತಿ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಆಂಧ್ರದಲ್ಲಿ ಸಂಕ್ರಮಣ ಕಾಲಾಲೂ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯ ಆಚರಣೆಯ ಪದ್ಧತಿಗಳಿವೆ.

ಮಕರ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿದೆ. ಮಕರ ಎಂಬುದು ಒಂದು ರಾಶಿ, ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಸೂರ್ಯದೇವನ ಚಲನೆ ಎಂಬ ಅರ್ಥವನ್ನು ನೀಡುತ್ತದೆ. ಸೂರ್ಯದೇವನು ಮಕರ ರಾಶಿಯತ್ತ ಚಲಿಸುತ್ತಾನೆ. ಸಂಕ್ರಾಂತಿ ಎಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಎಂದು ಕರೆಯಲಾಗುತ್ತದೆ. ಇದು ಚಳಿಗಾಲ ಮುಗಿದ, ಸೂರ್ಯ ಸೃಷ್ಟಿಯ ಕಾಲ. ಸಂಕ್ರಾತಿಯ ಸಮಯದಲ್ಲಿ ಎಳ್ಳಿಗೆ ಅತೀ ಪ್ರಾಮುಖ್ಯತೆಯಿದೆ.ಈ ಹಬ್ಬವನ್ನು ಹಳ್ಳಿಗಳಲ್ಲಿ ರೈತರು ಬೆಳೆದ ಬೆಳೆಯನ್ನು ಗ್ರಾಮದಲ್ಲಿ ರಾಶಿ ರಾಶಿ ಗುಂಪುಗಳನ್ನು ಹಾಕಿ ಪೂಜೆಯನ್ನು ಮಾಡುತ್ತಿದ್ದರು. ರೈತ ನಕ್ಕರೆ ಜಗವೆಲ್ಲ ಸಕ್ಕರೆ ಜಗತ್ತು ಸಲಹುವ ಭೂಮಿ ತಾಯಿಗೆ ಅನ್ನದಾತನಿಗೆ ವಂದಿಸುವ ಸುಂದರಗಳಿಗೆ ಈ ಹಬ್ಬವಾಗಿದೆ.

ಅನುಪಮ.ಆರ್.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ. ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ

Leave a Reply

Your email address will not be published. Required fields are marked *

error: Content is protected !!