ಆಲೂರು-ಮಲ್ಲಾಪುರ ಗ್ರಾಮದಲ್ಲಿ ಸಿರಿಧಾನ್ಯ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ

ಮಾಯಕೊಂಡ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಲೂರು-ಮಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ರಾಷ್ಟ್ರೀಯ ಆಹಾರ ಹಾಗೂ ಪೌಷ್ಠಿಕ
ಭದ್ರತೆ ಮತ್ತು ಆತ್ಮ ಯೋಜನೆಯಡಿ ಆಲೂರು-ಮಲ್ಲಾಪುರ ಗ್ರಾಮದ ಪ್ರಗತಿಪರ ರೈತ ಧ್ರುವ ಕುಮಾರ್ ಎಂಬುವರ ಜಮೀನಿನಲ್ಲಿ ಸಿರಿಧಾನ್ಯ (ಊದಲು) ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ಉಪ ಕಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2023ನೇ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಜಾಗತಿಕ ವಾಗಿ ಘೋಷಣೆ ಮಾಡಲಾಗಿದೆ.
ಅರಮನೆ ಮೈದಾನ ಬೆಂಗಳೂರಿನಲ್ಲಿ ಈ ತಿಂಗಳ ಕೊನೆಯಲ್ಲಿ ದೊಡ್ಡ ಮಟ್ಟದ ಸಿರಿಧಾನ್ಯ ಮೇಳ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಸಿರಿಧಾನ್ಯ (ಊದಲು) ಬೆಳೆ ಕ್ಷೇತ್ರೋತ್ಸವ