ಆ. 28, 29 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯಲ್ಲಿ 7176 ವಿದ್ಯಾರ್ಥಿಗಳು, 17 ಪರೀಕ್ಷಾ ಕೇಂದ್ರಗಳಲ್ಲಿ ತಯಾರಿ

IMG-20210821-WA0009

ದಾವಣಗೆರೆ: ಇದೇ ಆಗಸ್ಟ್ 28 ಹಾಗೂ 29 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಜಿಲ್ಲೆಯ 7176 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಲ್ಲ 17 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಜ್ವರ ತಪಾಸಣೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.

ಶನಿವಾರ ಸಾಮಾನ್ಯ ಪರೀಕ್ಷೆ-2021 (ಸಿಇಟಿ) ಪರೀಕ್ಷೆ ಪರ‍್ವ ಸಿದ್ಧತೆ ಕುರಿತಂತೆ ರಾಜ್ಯದ ಎಲ್ಲ ಜಿಲ್ಲಾ ಎಡಿಸಿ ಹಾಗೂ ಜಿಲ್ಲಾ ಶೈಕ್ಷಣಿಕ ಉಪನರ‍್ದೇಶಕರೊಂದಿಗೆ ರ‍್ನಾಟಕ ಪರೀಕ್ಷಾ ಪ್ರಾಧಿಕಾರದ ಕರ‍್ಯನರ‍್ವಾಹಕ ನರ‍್ದೇಶಕರಾದ ರಮ್ಯಾ ಅವರು ವಿಡಿಯೊ ಸಂವಾದ ನಡೆಸಿದ ಬಳಿಕ, ಅಧಿಕಾರಿಗಳೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಕೋವಿಡ್ ಪಾಸಿಟಿವ್ ಇರುವ ವಿದ್ಯರ‍್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲು ಇಚ್ಛಿಸಿದಲ್ಲಿ ಕಡ್ಡಾಯವಾಗಿ ಆಯಾ ಜಿಲ್ಲಾ ಮತ್ತು ತಾಲ್ಲೂಕು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಪಾಸಿಟಿವ್ ಬಂದ ವಿದ್ಯರ‍್ಥಿಗಳನ್ನು ಪರೀಕ್ಷೆಯಿಂದ ತೆರವುಗೊಳಿಸಬಾರದು.

ಪಾಸಿಟಿವ್ ಬಂದ ವಿದ್ಯಾರ್ಥಿಗಳ ಕುರಿತು ವಿಶೇಷ ಗಮನಹರಿಸಬೇಕು. ಹಾಗೂ ಇಂತಹ ವಿದ್ಯಾರ್ಥಿಗಳ ಪ್ರವೇಶ ಪತ್ರಕ್ಕೆ ಸಹಿ ಹಾಕಬಾರದು. ಓಎಂಆರ್ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಮೊದಲೇ ಸಹಿ ಹಾಕಿ ನೀಡಬೇಕು. ನಂತರ ಓಎಂಆರ್ ಪತ್ರಿಕೆಯನ್ನು ನಿಗದಿತ ಪೆಟ್ಟಿಗೆಯಲ್ಲಿ ಹಾಕಲು ಸೂಚಿಸಬೇಕು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಥರ‍್ಮಲ್ ಸ್ಕ್ಯಾನ್ ಬಳಸಿ ಜ್ವರ ತಪಾಸಣೆ ನಡೆಸಬೇಕು. ಶೇ.98 ಕ್ಕಿಂತ ಹೆಚ್ಚು ತಾಪಮಾನವಿದ್ದರೆ ಅಥವಾ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕೆಮ್ಮು, ಶೀತದಂತಹ ಲಕ್ಷಣ ಕಂಡು ಬಂದಲ್ಲಿ ಅಂತಹವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಬೇಕು.

ತಲಾ 24 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಇರಬೇಕು. ಒಂದು ಬೆಂಚಿಗೆ ಇಬ್ಬರಂತೆ ಒಟ್ಟು 12 ಬೆಂಚ್‌ಗಳನ್ನು ಒಂದು ಕೊಠಡಿಗೆ ನೀಡಬೇಕು. ವಿದ್ಯರ‍್ಥಿಗಳು ಊಟ, ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು. ವಿದ್ಯರ‍್ಥಿಗಳಿಗೆ ಸಾರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಕೈಗೊಳ್ಳಬೇಕು. ಪರೀಕ್ಷಾ ಮೇಲ್ವಿಚಾರಕರಿಗೂ ಗುರುತಿನ ಚೀಟಿಯನ್ನು ನೀಡಬೇಕು.

ಕೋವಿಡ್ ಪಾಸಿಟಿವ್ ಅಥವಾ ಕೋವಿಡ್ ಲೈಕ್ ಇಲ್‌ನೆಸ್ ಇರುವ ವಿದ್ಯಾರ್ಥಿಗಳು ವೆಬ್‌ಸೈಟ್ ಮೂಲಕ ಸಿಇಟಿ ಪರೀಕ್ಷೆಗೆ ರಿಜಿಸ್ಟರ್ ಮಾಡಿಸಲು ಆದೇಶ ನೀಡಲಾಗಿದ್ದು, ನೊಂದಣಿ ಮಾಡಿಸಿದ ವಿದ್ಯಾರ್ಥಿಗಳ ಮಾಹಿತಿ ಆ.26 ರಂದು ಲಭ್ಯವಾಗುತ್ತದೆ, ಅಂತಹ ವಿದ್ಯರ‍್ಥಿಗಳ ಬಗೆಗೆ ವಿಶೇಷ ಕಾಳಜಿ ವಹಿಸಬೇಕು. ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆದುಕೊಂಡು ಹೋಗಲು ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಬೇಕು ಎಂದು ತಿಳಿಸಿದರು.

ವೇಳಾಪಟ್ಟಿ : ಸಾಮಾನ್ಯ ಪ್ರವೇಶ ಪರೀಕ್ಷೆ ಎರಡು ದಿನ ನಡೆಯಲಿದ್ದು, ಆಗಸ್ಟ್ 28ರ ಶನಿವಾರ ಬೆಳಿಗ್ಗೆ 10-30 ರಿಂದ 11-30 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2-30 ರಿಂದ 3-50 ರವರೆಗೆ ಗಣಿತ. ಆಗಸ್ಟ್ 29ರ ಭಾನುವಾರ ಬೆಳಿಗ್ಗೆ 10-30 ರಿಂದ 11-30 ರವರೆಗೆ ಭೌತಶಾಸ್ತ್ರ ಮಧ್ಯಾಹ್ನ 2-30 ರಿಂದ 3-50 ರವರೆಗೆ ರಸಾಯನ ಶಾಸ್ತ್ರ ವಿಷಯಗಳ ಕುರಿತು ತಲಾ 60 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಬೀದರ್, ವಿಜಯಪುರ, ಬೆಳಗಾವಿ, ಬಳ್ಳಾರಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಯಲಿದ್ದು, ಆಗಸ್ಟ್ 30 ರ ಸೋಮವಾರ ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 12.30 ರವರೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ರ‍್ಥಿಗಳಿಗೆ ತಲಾ 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಡಿಡಿಪಿಯು ಶಿವರಾಜು ಸೇರಿದಂತೆ ಪ್ರಾಂಶುಪಾಲರು, ಕೊಠಡಿ ವೀಕ್ಷಕರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!