ಖಾಲಿ ಕುರ್ಚಿಗಳನ್ನುದ್ದೇಶಿಸಿ ಭಾಷಣ ಮಾಡಿದ ಚನ್ನಗಿರಿ ಶಾಸಕ.! ತುಮ್‌ಕೋಸ್ ಮಾರ್ಕೇಟ್ ಉದ್ಘಾಟನಾ ಊಟಕ್ಕೆ ಹಾಜರಾದ ಜನ

ಚನ್ನಗಿರಿ: ಚನ್ನಗಿರಿ ಪಟ್ಟಣದಲ್ಲಿರುವ ತುಮ್‌ಕೋಸ್ ಸೂಪರ್ ಮಾರುಕಟ್ಟೆಯನ್ನು ಸೋಮವಾರ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ಬೃಹತ್ ಪೆಂಡಾಲ್, ಬರುವ ಜನತೆಗೆ ಕುಳಿತುಕೊಳ್ಳಲು ಸಾವಿರಾರು ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಶಾಸಕರು ಮಾರುಕಟ್ಟೆ ಉದ್ಘಾಟಿಸಿ ಭಾಷಣ ಮಾಡುವಾಗ ಸಮಾರಂಭದ ಜಾಗದಲ್ಲಿ ಬರೀ ಖಾಲಿ ಕುರ್ಚಿಗಳೇ ಇದ್ದವು. ಬಂದವರ ಸಂಖ್ಯೆ ಅತಿ ವಿರಳವಾಗಿತ್ತು.
ಶಾಸಕರಿಗೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಂದವರು ಹೇಳಿಕೊಳ್ಳುತ್ತಿದ್ದರು.