ಲೋಕಲ್ ಸುದ್ದಿ

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ರೈತನ ಶ್ರಮ ಕೊಚ್ಚಿ ಹೋಗಿದ್ದು, ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಈ ಮೂಲಕ ಹಾಕಿದ ಬಂಡಾವಾಳವೆಲ್ಲ ನೀರಿನ ಪಾಲಾಗಿದೆ. ಜಗಳೂರು, ದಾವಣಗೆರೆ, ಹಿರೇತೋಗಲೇರಿ ಸೇರಿದಂತೆ ನಾನಾ ಕಡೆ ಭತ್ತ, ಅಡಕೆ, ಹತ್ತಿ, ಮಾವು, ಬಾಳೆ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗಿದೆ.

ಚನ್ನಗಿರಿ ತಾಲೂಕಿನ ಹಿರೇತೊಗಲೇರಿ ಗ್ರಾಮದಲ್ಲಿ ಮಳೆ ಅವಾಂತರಕ್ಕೆ ರೈತರು ತತ್ತರಿಸಿದದ್ದು, ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಆಲಿಕಲ್ಲು ಮಳೆಯಿಂದ ಮಣ್ಣು ಪಾಲಾಗಿದೆ. ಎಕರೆಗೆ 40 ಚೀಲ ನಿರೀಕ್ಷೆ ಮಾಡಿದ್ದ ರೈತರಿಗೆ ನಿರಾಸೆ ಕಾರ್ಮೋಡವಾಗಿದ್ದು, ಕಟಾವಿಗೆ ಬಂದಿದ್ದ ಭತ್ತ ಧರೆಗೆ ಉರುಳಿದೆ, ಇನ್ನೇನೂ ಕೆಲವೇ ದಿನಗಳಲ್ಲಿ ಧರೆಗೆ ಉರುಳಿದ ಭತ್ತ ಮೊಳಕೆಯೊಡಲಿದೆ. ಇನ್ನು ಆಲಿಕಲ್ಲು ಹೊಡೆತಕ್ಕೆ 250 ಕ್ಕು ಹೆಚ್ಚು ಪ್ರದೇಶದ ಭತ್ತ ಮಣ್ಣು ಪಾಲಾಗಿದೆ. ಇನ್ನೆರೆಡು ದಿನ ಕಳೆದಿದ್ದರೆ ರೈತರು ಕೊಯ್ಲು ಮಾಡುತ್ತಿದ್ದರು. ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬುದು ರೈತರ ಸಂಕಟವಾಗಿದೆ. ಇನ್ನು ಅಧಿಕಾರಿಗಳೇ ಹಾನಿ ಅಂದಾಜಿಸಿ ಸೂಕ್ತ ಪರಿಹಾರ ನೀಡಿ, ರೈತನ ಬದುಕನ್ನು ಹಸನಾಗಿಸಬೇಕಿದೆ

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹಲವು ದಿನಗಳಿಂದ ಬೇಸಿಗೆ ಬಿಸಿಲಿಗೆ ಜನ ಹೈರಾಣಾಗಿದ್ದು, ಕೆಲವು ದಿನಗಳಿಂದ ಬಿಸಿಲ ಬೇಗೆಗೆ ಬಸವಳಿದಿದ್ದ ದಾವಣಗೆರೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆ ತಂಪೆರೆದಿದೆ. ಸಂಜೆ ಹೊತ್ತಿಗೆ ಭಾರಿ ಗಾಳಿ ಬೀಸಿತ್ತು. ನಾಲ್ಕು ಹನಿ ಮಳೆ ಬಂದು ನಾಪತ್ತೆಯಾಗಿತ್ತು. ರಾತ್ರಿ 10 ಗಂಟೆಯ ಹೊತ್ತಿಗೆ ಗುಡುಗು ಮಿಂಚು ಜತೆಗೆ ಜೋರಾಗಿ ಮಳೆ ಸುರಿಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಬಂದಿತ್ತು. ಈ ಸಮಯದಲ್ಲಿ ವಿದ್ಯುತ್ ಕೂಡ ಕಡಿತಗೊಂಡಿತು. ಹರಿಹರ ತಾಲೂಕಿನ ಮಲೇಬೆನ್ನೂರು, ಕಡರನಾಯ್ಕನಹಳ್ಳಿ ಸಹಿತ ವಿವಿಧೆಡೆ ಸಂಜೆಯೇ ಮಳೆ ಸುರಿಯಿತು. ಮಳೆಯಿಂದ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿತ್ತು. ಜಿಲ್ಲೆಯ ವಿವಿಧೆಡೆ ಮಳೆಯಿಂದಾಗಿ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಊರೆಲ್ಲ ಕತ್ತಲಲ್ಲಿ ಮುಳುಗಿತು. ಅಡಕೆ ತೋಟ ಸಹಿತ ವಿವಿಧ ತೋಟ, ಕೃಷಿಗಳಿಗೆ ಮಳೆ ಬಂದಿರುವುದು ಅನುಕೂಲವಾದರೂ, ಭತ್ತ, ಹತ್ತಿಗೆ ಬೆಳೆಗೆ ಇದು ಅನಾನುಕೂಲವಾಗಿದೆ.

ಜಗಳೂರು : ಸದಾ ಬರಗಾಲದಿಂದ ಇರುವ ಜಗಳೂರು ತಾಲೂಕಿನಲ್ಲಿಯೂ ಮಳೆ ಸುರಿದ್ದಿದ್ದು, ಬಾಳೆ ಬೆಳೆಹಾನಿಯಾಗಿದೆ. ಈ ಪ್ರದೇಶಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಸರ್ವೆ ಮಾಡುತ್ತಿದ್ದಾರೆ. ಸೊಕ್ಕೆ, ಗುರುಸಿದ್ದಾಪುರ, ಮಲೆ ಮಾಚಿಕೆರೆ ಗ್ರಾಮಗಳಲ್ಲಿ ಮಳೆಯಿಂದ ಆದ ಸಾಕಷ್ಟು ಹಾನಿಯಾಗಿದೆ. ಇನ್ನೂ ಬಾಳೆ ಬೆಳೆ ವೀಕ್ಷಣೆಗೆ ಬೆಂಗಳೂರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ವಿಶ್ವನಾಥ್, ತೋಟಗಾರಿಕೆ ಇಲಾಖೆ ಸಹಾಯಕ ಹಿರಿಯ ನಿರ್ದೇಶಕ (ಎಸ್ಡಿಎಚ್) ವೆಂಕಟೇಶ್ ಮೂರ್ತಿ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ವೆಂಕಟೇಶ್ ನಾಯ್ಕ್ ನೇತೃತ್ವದ ತಂಡ ತಾಲೂಕಿನ ಮಠದದ್ಯಾಮೇನಹಳ್ಳಿ ಗ್ರಾಮದ ಎಂ.ಪಿ.ತಿಪ್ಪೇಸ್ವಾಮಿ ಸೇರಿದಂತೆ ನಷ್ಟ ಅನುಭವಿಸುತ್ತಿರುವ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ಅಧಿಕಾರಿಗಳಿಗೆ ರೈತ ಎಂ.ಪಿ.ತಿಪ್ಪೇಸ್ವಾಮಿ ಮಳೆಯಿಂದ ಆದ ನಷ್ಟದ ಬಗ್ಗೆ ವಿವರಿಸಿದರು. ಕಷ್ಟ ಪಟ್ಟು ಬೆಳೆದ ಬಾಳೆ ಬಿರುಗಾಳಿಗೆ ತರಗೆಲೆಯಂತೆ ಅಪ್ಪಳಿಸಿದೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆಸಲಾಗಿತ್ತು. ಆದರೆ ಅಕಾಲಿಕ ಮಳೆಯಿಂದ ಆದ ನಷ್ಟ ಹೇಳತೀರದಾಗಿದೆ. ದಯಮಾಡಿ ಇಲಾಖೆ ಅಧಿಕಾರಿಗಳು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಜಂಟಿ ನಿರ್ದೇಶಕ ಡಾ.ವಿಶ್ವನಾಥ್ ಮಾತನಾಡಿ, ಕ್ಷೇತ್ರದಲ್ಲಿ ಆಗಿರುವ ನಷ್ಟದ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ರೈತರಿಗೆ ಆದ ನಷ್ಟದ ವರದಿ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ ಸಾಧ್ಯವಾದಷ್ಟು ಬೇಗ ರೈತರ ಅಕೌಂಟ್‌ಗಳಿಗೆ ಬೆಳೆ ನಷ್ಟ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

ಧರೆಗೆರುಳಿದ ಕಂಬಗಳು : ತಾಲೂಕಿನ ಬಿದರಕೆರೆ-ನಿಬಗೂರಿನಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಗಾಳಿ, ಮಳೆಗೆ ಇಬ್ಬರು ರೈತರ ಟಿಸಿ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಗ್ರಾಮದ ಕವಿತಮ್ಮ ಮತ್ತು ಗೌರಮ್ಮನಹಳ್ಳಿ ಗ್ರಾಮದ ಮಹಾಂತೇಶ್ ಅವರ ಹೊಲಗಳಲ್ಲಿ ಅಳವಡಿಸಲಾಗಿದ್ದ 2 ಟಿಸಿ, 7 ವಿದ್ಯುತ್ ಕಂಬಗಳು ಗಾಳಿ, ಮಳೆ ಧರೆಗುರುಳಿದಿದೆ. ಬೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾಡಿರುವ ಎಡವಟ್ಟಿನಿಂದ ರೈತರು ಪರಿತಪಿಸುವಂತಾಗಿದೆ. ಮತ್ತೆ ಟಿಸಿ ಅಳವಡಿಕೆಗೆ ರೈತರು ಬೆಸ್ಕಾಂ ಎಇಇ, ಎಸ್‌ಒ, ಲೈನ್‌ಮನ್‌ಗಳಿಗಾಗಿ ಅಲೆಯುವ ಜೊತೆಗೆ ಟಿಸಿ ಅಳವಡಿಕೆ ಕಂಬಗಳ ಮರುಸ್ಥಾಪನೆಗೆ ಒಬ್ಬೊಬ್ಬ ರೈತರು ಅಂದಾಜು 20 ಸಾವಿರ ರೂ ಖರ್ಚು ಮಾಡಬೇಕಾಗಿದೆ.

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

ಸಿಡಿಲಿಗೆ ಎತ್ತು ಬಲಿ: ಬೇವಿನ ಮರದ ಅಡಿ ಕಟ್ಟಿಹಾಕಿದ್ದ ಎತ್ತು ಭಾನುವಾರ ಸಂಜೆ ಸಿಡಿಲಿಗೆ ಬಲಿಯಾಗಿದೆ. ತಾಲೂಕಿನ ಚಿಕ್ಕ ಉಜ್ಜಿನಿ ಗ್ರಾಮದ ಚಂದ್ರಶೇಖರ್ ಸ್ವಾಮಿ ಅವರಿಗೆ ಸೇರಿದ ಅಂದಾಜು 50 ಸಾವಿರ ಬೆಲೆ ಬಾಳುವ ಎತ್ತು ಸಿಡಿಲಿಗೆ ಬಲಿಯಾಗಿದೆ. ಚಂದ್ರಶೇಖರ್ ಸ್ವಾಮಿ ಅವರು ಜಗಳೂರು ಪಟ್ಟಣದ ಪೊಲೀಸ್‌ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ಒಟ್ಟಾರೆ ವರುಣ ತನ್ನ ಪ್ರತಾಪ ತೋರಿದ್ದು, ಜನರಿಗೆ ಅನ್ನಕೊಡುವ ಅನ್ನದಾತ ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾನೆ.

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

Click to comment

Leave a Reply

Your email address will not be published. Required fields are marked *

Most Popular

To Top