ಚನ್ನಗಿರಿ ತಾಲ್ಲೂಕಲ್ಲಿ ₹ 4.14 ಕೋಟಿ ವಿವಿಧ ಕಾಮಗಾರಿಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚಾಲನೆ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನಲ್ಲಿ ಅಂದಾಜು 4.14 ಕೋಟಿ ರೂ., ವೆಚ್ಚದಲ್ಲಿ ದೇವರಹಳ್ಳಿಯಿಂದ – ಕೂಂಡದಹಳ್ಳಿ ರಸ್ತೆ ವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಚನ್ನಾಪುರಾ ಗ್ರಾಮದ ಮಠದ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ., ಎರಡು ಶಾಲಾ ಕೊಠಡಿ. 25 ಲಕ್ಷದ ರೂ., ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಕಾಂಕ್ರೀಟ್ ಚರಂಡಿ ನಿರ್ಮಾಣ.
ಚಿಕ್ಕೂಡ ಗ್ರಾಮದಲ್ಲಿ 1 ಶಾಲಾ ಕೊಠಡಿ. ಈಶ್ವರ ದೇವಸ್ಥಾನಕ್ಕೆ 5 ಲಕ್ಷ ಮತ್ತು 20 ಲಕ್ಷದ ಸಮುದಾಯ ಭವನ ನಿರ್ಮಾಣ. ಕೂಂಡದಹಳ್ಳಿ ಸಿದ್ದರಾಮೇಶ್ವರ ಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣದ ಕಾಮಗಾರಿಗೆ 5 ಲಕ್ಷ., ಒಂದು ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.