ಚೇತನ ಸಿರಿ- 2023ವಾರ್ಷಿಕ ದಿನಾಚರಣೆ ಇಂದು
ದಾವಣಗೆರೆ: ಎಸ್.ಎಸ್.ಜಿ.ಎಂ ಶಿಕ್ಷಣ ಮತ್ತು ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಪೈಲ್ವಾನ್ ಚನ್ನಬಸಪ್ಪ ಬಡಾವಣೆಯಲ್ಲಿರುವ ಎಸ್‌ಎಸ್‌ಎಂ ವಸತಿ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಚೇತನ ಸಿರಿ- 2023 ವಾರ್ಷಿಕ ದಿನಾಚರಣೆ ಕಾರ್ಯಕ್ರಮವನ್ನು ಫೆ. 11ರ ಇಂದು ಸಂಜೆ 4:30 ಕ್ಕೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇಯರ್ ಜಯಮ್ಮ ಗೋಪಿನಾಯ್ಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರ್ಕಾರದ ಮುಖ್ಯ ಸಚೇತಕ ಡಾ. ವೈ.ಎ ನಾರಾಯಣ ಸ್ವಾಮಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಎಸ್‌ಎಸ್‌ಎಂಡಿ ಶೈಕ್ಷಣಿಕ ಮತ್ತು ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಕೆ. ಮಂಜ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದು, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್. ಮಂಜುನಾಥ, ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್, ಹಿರಿಯ ಪತ್ರಕರ್ತ ಬಿ. ಎನ್ ಮಲ್ಲೇಶ್, ಕ.ಸಾ.ಪ.ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಿ ಎಂ ರಾಥೋಡ್, ಬಿಇಓ ಬಿ.ಎಂ. ದಾರುಕೇಶ್, ಜಿಲ್ಲಾ ಮುಖ್ಯೋಪಾಧ್ಯಾಯರ ಒಕ್ಕೂಟದ ಅಧ್ಯಕ್ಷ ಹಾಲೇಶಪ್ಪ ಮತ್ತಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.