ಚಿತ್ರದುರ್ಗ : ಗಾಂಧಿ ವೃತ್ತದಲ್ಲಿ ಜನಜಾಗೃತಿ ಕಾರ್ಯಕ್ರಮ!ಖಾಸಗಿ ಬಸ್ ಚಾಲಕರಿಗೆ ಒತ್ತಡ ಹೆಚ್ಚಾಗುತ್ತಿದೆ. ಅವರಿಗೆ ಸುರಕ್ಷತೆಯ ಬಗ್ಗೆ ಜಾಗೃತಿ ಅಗತ್ಯವಿದೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ
ಚಿತ್ರದುರ್ಗ : ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಸಂಚರಿಸುವ, ಖಾಸಗಿ ಬಸ್ ವಾಹನ ಚಾಲಕರಿಗೆ ಮತ್ತು ಕಂಡಕ್ಟರ್‌ಗಳಿಗೆ ಹೆಚ್ಚಿನ ತರಬೇತಿಯನ್ನು ನೀಡಬೇಕಾಗುತ್ತದೆ, ಏಕೆಂದರೆ ಸಾಮರ್ಥ್ಯಕ್ಕೆ ಮೀರಿ ಜನ ಬಸ್ಸಲ್ಲಿ ಕುಳಿತುಕೊಳ್ಳುವುದರಿಂದ, ಅವರು ಹೆಚ್ಚು ಜಾಗ್ರತೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ಸರ್ಕಾರಿ ಬಸ್ ಚಾಲಕರಿಗಿಂತ ಖಾಸಗಿ ಬಸ್ ಚಾಲಕರಿಗೆ ಹೆಚ್ಚಿನ ತರಬೇತಿ ಮತ್ತು ಎಚ್ಚಿಕೆ ಅಗತ್ಯವಾಗಿದೆೆ, ಕಾರಣ ಹೆಚ್ಚು ಗ್ರಾಮೀಣ ಜನರಿಗೆ, ಸಂಚಾರ ವ್ಯವಸ್ಥೆ ಕಲ್ಪಿಸಲು ನಾವು ಖಾಸಗಿ ವಾಹನಗಳನ್ನು ಹೆಚ್ಚು ಬಳಸುತ್ತಿರುತ್ತೇವೆ, ಅವುಗಳ ವೇಗದ ಮಿತಿ, ಸಮಯದ ಒತ್ತಡ, ಮಾಲೀಕರ ಹಣ ಸರಿದೂಗಿಸುವ ಒತ್ತಡ ಹಾಗೂ ಸರ್ಕಾರಿ ಬಸ್ಸುಗಳಿಗೆ ಪೈಪೋಟಿ ನೀಡುವ ಬರದಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ಚಿತ್ರದುರ್ಗ ನಗರದ ಗಾಂಧಿ ವೃತ್ತದ ಬಳಿ ಕನ್ನಡ ಜ್ಞಾನ ವಿಜ್ಞಾನ ಸಮಿತಿ ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ ಅಯೋಜಿಸಿದ್ದ ರಸ್ತೆ ಅಪಘಾತಗಳಿಗೆ ಪರಿಹಾರ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪಾವಗಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ಚಾಲಕನ ನಿರ್ಲಕ್ಷ ಎದ್ದು ಕಾಣುತ್ತಿದೆ, ಮೊಬೈಲು ಉಪಯೋಗಿಸಿ ಕೊಂಡು ವಾಹನ ಚಾಲನೆ ಮಾಡಿ, ಬಸ್ಸಿನಲ್ಲಿ ಸಾಮರ್ಥ್ಯಕ್ಕೆ ಮೀರಿ ಜನರನ್ನು ಹತ್ತಿಸಿಕೊಂಡು ವೇಗವಾಗಿ ಹೋದಾಗ, ಅದು ತನ್ನ ಬ್ಯಾಲೆನ್ಸ್ ಕಳೆದುಕೊಂಡು ಉರುಳಿ ಬಿದ್ದದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ಸಾಮರ್ಥ್ಯಕ್ಕೂ ಮೀರಿ ಜನರನ್ನ ಅತ್ತಿಸಿಕೊಂಡು ಹೋಗುವಾಗ ಚಾಲಕರು ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ವೇಗದ ಗತಿ ಕಡಿಮೆ ಮಾಡಿಕೊಳ್ಳಬೇಕು ಎಂಬ ಅರಿವನ್ನು ನಾವು ಮೂಡಿಸಬೇಕಾಗಿತ್ತು. ಸರ್ಕಾರಿ ವಾಹನಕ್ಕಿಂತ ಖಾಸಗಿ ವಾಹನಗಳು ಹೆಚ್ಚು ಪೈಪೋಟಿಯಿಂದ ರಸ್ತೆಯಲ್ಲಿ ಸಂಚರಿ ಸುತ್ತಿರುತ್ತವೆ, ಅವು ಇನ್ನೊಂದು ವಾಹನ ಜತೆ ಪೈಪೋಟಿ ಮಾಡಿ ತಮ್ಮ ಹಣ ಗಳಿಕೆಯನ್ನ ಸರಿದೂಗಿಸಿಕೊಳ್ಳುವತ್ತ ಗಮನಹರಿಸುತ್ತ ಇರುತ್ತವೆ, ಹಾಗಾಗಿ ಅವು ರಸ್ತೆ ಮತ್ತು ಪ್ರಯಾಣಿಕರ ಸುರಕ್ಷಿತೆ ಬಗ್ಗೆ ಮರೆತುಬಿಡುವ ಸಂಭವ ಹೆಚ್ಚಾಗುತ್ತಿರುತ್ತವೆ ಎಂದರು.
ಖಾಸಗಿ ವಾಹನಗಳು ಹೆಚ್ಚು ಗ್ರಾಮೀಣ ರಸ್ತೆಗಳು ಸಂಚರಿಸುತ್ತಿರುವಾಗ, ರಸ್ತೆಗಳಲ್ಲಿ ಗುಂಡಿ ತಗ್ಗುಗಳು, ಕೆರೆಕಟ್ಟೆಗಳು, ಅಂಕುಡೊAಕು ರಸ್ತೆಗಳಲ್ಲಿ, ದಾಟಿ ಹೊರ ಬರಬೇಕಾಗುತ್ತದೆ. ಖಾಸಗಿ ಬಸ್ ಮಾಲೀಕರು ವಾಹನ ಚಾಲಕರನ್ನು ನೇಮಿಸಿಕೊಳ್ಳುವಾಗ ಅವರ ಅನುಭವ ಮತ್ತು ಅವರ ವಿದ್ಯಾರ್ಹತೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುತ್ತಿದ್ದಾರಾ ಅಥವಾ ವೇಗದಲ್ಲಿ ಚಾಲನೆ ಮಾಡುತ್ತಿದ್ದಾರೆ ಎಂಬುದನ್ನು ಗಮನ ಇರಿಸಿ ನೋಡಬೇಕಾಗುತ್ತದೆ, ಸರ್ಕಾರಿ ಬಸ್ಸುಗಳು ಹೆಚ್ಚು ನಗರಗಳಲ್ಲಿ ಸಂಚರಿಸುತ್ತಾ ಉತ್ತಮವಾದ ರಸ್ತೆಯಲ್ಲಿ ಚಲಿಸುತ್ತವೆ, ಪ್ರಯಾಣಿಕರು ಸಹ ಮಿತಿ ಮೀರದಂತೆ ಒಳಗಡೆ ಕುಳಿತು ಪ್ರಯಾಣಿಸುವುದರಿಂದ ಜನರು ಸರ್ಕಾರಿ ಬಸ್ಸುಗಳನ್ನ ಒದಗಿಸಿ, ಅಪಘಾತ ತಪ್ಪಿಸಿ ಎನ್ನುತ್ತಾರೆ ಎಂದರು.
ಸರ್ಕಾರಿ ವಾಹನಗಳಿಗೆ ಅಷ್ಟೊಂದು ಪೈಪೋಟಿ ಹಾಗೂ ಮಾಲಿಕರ ಒತ್ತಡ ಇರುವುದಿಲ್ಲ, ಆರ್‌ಟಿಒ ದವರು ಹೆಚ್ಚು ನಿಗಾವಹಿಸಿ, ಖಾಸಗಿ ವಾಹನಗಳ ಚಾಲಕರನ್ನು, ಮಾಲೀಕರನ್ನ, ಕಂಡಕ್ಟರ್‌ಗಳನ್ನು ಜಾಗ್ರತಗೊಳಿಸಿ, ಅಪಘಾತಗಳನ್ನ ಕಡಿಮೆಗೊಳಿಸುವುದರ ಬಗ್ಗೆ ಯೋಜನೆಗಳನ್ನು ರೂಪಿಸಬೇಕಾಗಿದೆ, ರ‍್ಮಿಟ್ ಇಲ್ಲದೇ ಸಂಚರಿಸುವ ವಾಹನಗಳನ್ನ ತಡೆಯಬೇಕಾಗಿದೆ ಎಂದರು. ಬಹಳಷ್ಟು ಸಾರಿ ನಾವು ಚಾಲಕರಿಗೆ, ಕಂಡಕ್ಟರ್‌ಗಳಿಗೆ ತರಬೇತಿ ನೀಡುವುದು, ಜಾಗೃತಿಗೊಳಿಸುವುದು ಮಾಡುವುದಿಲ್ಲ. ಅಪಘಾತವಾದಾಗ ಮಾತ್ರ ನಾವು ಅವರ ಬಗ್ಗೆ ಗಮನಹರಿಸುತ್ತೇವೆ, ರಸ್ತೆ ಅಪಘಾತ ಸತ್ತಾಗ ಮಾತ್ರ ನಾವು ಅವತ್ತೊಂದು ದಿವಸ ಅದರ ಬಗ್ಗೆ ವಿಚಾರ ಮಾಡುತ್ತೇನೆ, ಆಮೇಲೆ ಮರೆತು ಬಿಡುತ್ತೇವೆ, ಸತ್ತ ವ್ಯಕ್ತಿಗೆ 5 ಲಕ್ಷ, ಹತ್ತು ಲಕ್ಷ ಪರಿಹಾರ ನೀಡಿ, ನಾವು ಮತ್ತೆ ನಮ್ಮ ಮಾಮೂಲು ಜೀವನದಲ್ಲಿ ಓಡಿಬಿಡುತ್ತೇವೆ, ಅಪಘಾತವಾದ ನಂತರವೂ ಸಹ ನಾವು ಬಸ್ ನಿಲ್ದಾಣದಲ್ಲಿ, ಚಾಲಕರಿಗೆ, ಕಂಡಕ್ಟರುಗಳಿಗೆ ಜಾಗೃತಗೊಳಿಸಬೇಕಾಗಿದೆ ಹಾಗೂ ಅವರನ್ನ ಜವಾಬ್ದಾರಿಯುತವಾಗಿ ವಾಹನ ಚಲಾಯಿಸುವಂತೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಗಾಂಧಿವೃತ್ತದಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ, ವಾಹನವನ್ನು ನಿಧಾನವಾಗಿ ಚಲಿಸಿ, ವೇಗವೇ ಸಾವಿಗೆ ಕಾರಣ ಎಂಬ ಘೋಷಣೆಗಳನ್ನು ಕೂಗಿ ಜನಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಎಚ್. ಎಸ್. ರಚನಾ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಎಚ್. ಎಸ್. ಪ್ರೇರಣಾ, ಖಾದಿ ಸಹಕಾರ ಸಂಘದ ಮುರುಗೇಶ್, ಪವಿತ್ರಾ ಉಪಸ್ಥಿತರಿದ್ದರು.