ದಾವಣಗೆರೆ ಸೇರಿ ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ವರ್ಗವಾರು ಪಟ್ಟಿ ಬಿಡುಗಡೆ
ದಾವಣಗೆರೆ: ದಾವಣಗೆರೆ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಯ 25 ನೇ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ವಿವಿಧ ವರ್ಗವಾರು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ಕಾಂಗ್ರೆಸ್ ಪಕ್ಷದಿಂದ ಎ ನಾಗರಾಜ್, ಚಮನ್ ಸಾಬ್, ಆಶಾ ಉಮೇಶ್, ಎಬಿ ರಹೀಮ್, ಅಬ್ದುಲ್ ಲತೀಫ್ ಪಾಲಕೆಯ ಮುಂದಿನ ಅವಧಿಗೆ ಚುಕ್ಕಾಣಿ ಹಿಡಿಯಲು ಪ್ರಮುಖ ಪಾತ್ರವಹಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.