Thungarathi: ತುಂಗಭದ್ರ ನದಿಯ ದಡದಲ್ಲಿ ತುಂಗಾರತಿಗಾಗಿ 108 ಯೋಗ ಮಂಟಪಗಳಿಗೆ ಶಿಲನ್ಯಾಸ ನೆರವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

Thungarathi harihara

 

ದಾವಣಗೆರೆ: ಹರಿಹರ ಬಳಿಯಿರುವ ವೀರಶೈವ ಪಂಚಮಸಾಲಿ ಮಠದ ಜಗದ್ಗುರು ವಚನಾನಂದ ಸ್ವಾಮೀಜಿಗಳ Harihara Panchamasali Vachananda Swamiji ಕಲ್ಪನೆಯ ಕನಸನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ CM  Basavaraj Bommai ಶಿಲಾನ್ಯಾಸ ನೆರವೇರಿಸುವ ಮೂಲಕ ಈಡೇರಿಸಿದ್ದಾರೆ.

ಸುಮಾರು ಮೂವತ್ತು ಕೋಟಿ ವೆಚ್ಚದಲ್ಲಿ ರಾಘವೇಂದ್ರಸ್ವಾಮಿ ಮಠದಿಂದ ಹರಿಹರೇಶ್ವರ Harihareshwara temple ದೇವಸ್ಥಾನದ ವರೆಗೆ ತುಂಗಭದ್ರ ನದಿಯ ದಡದಲ್ಲಿ ತುಂಗಭದ್ರಾ Thungabhadra river ಆರತಿ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ 108 ಯೋಗ ಮಂಟಪಗಳಿಗೆ ನಿರ್ಮಾಣ ಮಾಡುವುದು, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು, ತುಂಗಭದ್ರೆಯರನ್ನ ಪಾವನಗೊಳಿಸುವ ಉದ್ದೇಶವನ್ನ ಹೊಂದಿರುವಂತಹ ಅತ್ಯಂತ ಪವಿತ್ರವಾದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಲಾನ್ಯಾಸ ನೆರವೇರಿಸುವ ಮೂಲಕ ಹರಿಹರದ ಗತ ವೈಭವಕ್ಕೆ ನಾಂದಿ ಹಾಡಿದರು.

ಕೋವಿಡ್ ಮಾರ್ಗಸೂಚಿಯಂತೆ ರಾಘವೇಂದ್ರಸ್ವಾಮಿ ಮಠದ ಕೆಳಗಿರುವ ತುಂಗಭದ್ರ ನದಿಯ ದಡದ ಮೇಲೆ ಅತ್ಯಂತ ಸರಳವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಮೂಲಕ ವಚನಾನಂದ ಶ್ರೀಗಳ ತುಂಗಭದ್ರಾ ಸ್ವಚ್ಛತೆ ಹಾಗೂ ಪವಿತ್ರ ನದಿಗಳಿಗೆ ತುಂಗಾರತಿ ಕಾರ್ಯಕ್ರಮದ ಕಲ್ಪನೆಯ ಕನಸನ್ನು ಸಾಕಾರಗೊಳಿಸುವ ಮೂಲಕ ಶ್ರೀಗಳ ಬಹುದಿನದ ಬೇಡಿಕೆ ಒಂದನ್ನ ಈಡೇರಿಸಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಸಚಿವ ಸಂಪುಟದ ಸಹೋದ್ಯೋಗಿಗಳು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ನಗರಾಡಳಿತದ ಅಧಿಕಾರಿಗಳು ಕ್ಷೇತ್ರದ ವಿವಿಧ ಪಕ್ಷದ ಮುಖಂಡರು, ಪವಿತ್ರ ನದಿಗಳ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!