ಹುಬ್ಬಳ್ಳಿ :ರಾಮನಿಗೂ ಭಜರಂಗದಳಕ್ಕೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಮನಗೂ ಹನುಮನಿಗೂ ಯಾವ ರೀತಿ ಸಂಬಂಧ ಇದೆಯೋ ಅದೇ ರೀತಿ ಹನುಮನಿಗೂ ಬಜರಂಗದಳಕ್ಕೂ ಸಂಬಂಧ ಇದೆ. ಇದನ್ನು ಕಾಂಗ್ರೆಸ್ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಜನರ ಭಾವನೆಗೆ ಧಕ್ಕೆ ತರುವುದು ಸರಿಯಲ್. ಕಾರ್ಯಕ್ರಮದ ಆಧಾರದಲ್ಲಿ ಚುನಾವಣೆ ಎದುರಿಸಿ. ಜಾತಿ ಧರ್ಮ ಕೋಮು ಭಾವನೆ ಕೆರಳಿಸೋದು ಸರಿಯಲ್ಲ . ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ತೋರಿಸುತ್ತೆ. ಕಾಂಗ್ರೆಸ್ ಎಸ್ ಡಿಪಿಐ ಮತ್ತು ಪಿಎಫ್ ಐ ಕಪಿಮುಷ್ಠಿಯಲ್ಲಿದೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.
