ಎಳೆಯೋಣ ಬನ್ನಿ ಕನ್ನಡದ ತೇರು : ಬಿ. ವಾಮದೇವಪ್ಪ! “ದಾವಣಗೆರೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಭರದ ಸಿದ್ದತೆ

ದಾವಣಗೆರೆ : ದಾವಣಗೆರೆ ಸಮೀಪದ ಎಲೇಬೇತೂರು ಗ್ರಾಮದಲ್ಲಿ ಮಾ.26ರ ನಾಳೆಯಿಂದ 27ರವರೆಗೆ ನಡೆಯಲಿರುವ “ದಾವಣಗೆರೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಇನ್ನೇನೂ “ದಾವಣಗೆರೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಎಳೆಯೋಣ ಬನ್ನಿ ಕನ್ನಡದ ತೇರನ್ನು ಎಂದು ಸಕಲ ಕನ್ನಡಿಗರನ್ನು ಉದ್ದೇಶಿಸಿ ನಾಳೆಯಿಂದ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ.


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನಿಸಿರುವ ಬಿ. ವಾಮದೇವಪ್ಪ ಅವರು “ಗೌರವಾನ್ವಿತ ಎಲ್ಲಾ ಕನ್ನಡದ ಬಂಧುಗಳೇ, ತಮಗೆ ಗೌರವಪೂರ್ವಕ ಆಮಂತ್ರಣ, ಇದೇ ಮಾರ್ಚ್ 26 ಮತ್ತು 27ರ ಶನಿವಾರ ಮತ್ತು ಭಾನುವಾರದಂದು ದಾವಣಗೆರೆ ಸಮೀಪದ ಎಲೆಬೇತೂರು ಗ್ರಾಮದಲ್ಲಿ ಜರುಗಲಿರುವ “ದಾವಣಗೆರೆ ಜಿಲ್ಲಾ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ತಮಗೆಲ್ಲರಿಗೂ ಹೃದಯಪೂರ್ವಕವಾದ ಸ್ವಾಗತ. ಅರ್ಥಪೂರ್ಣವಾದ ನುಡಿ ತೇರನ್ನು ಅತ್ಯಂತ ಯಶಸ್ವಿಯಾಗಿ ಎಳೆಯೋಣ. ಇದೇ ತಮಗೆ ವೈಯಕ್ತಿಕ ಆಹ್ವಾನ ಎಂದು ಭಾವಿಸಿ, ತಾವೂ ಬನ್ನಿ, ತಮ್ಮವರನ್ನು ಕರೆದುಕೊಂಡು ಬನ್ನಿ” ಎಂದು ಹೇಳಿದ್ದಾರೆ.


18 ಎಕರೆ ಪ್ರದೇಶದ ಜಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ. 200*100 ಅಡಿಯ ಸಭಾಂಗಣದಲ್ಲಿ 40*60 ಅಡಿಯ ವೇದಿಕೆ ಸಿದ್ದಗೊಳ್ಳುತ್ತಿದೆ. ಸಭಾಂಗಣದಲ್ಲಿ 1500 ಆಸನದ ವ್ಯವಸ್ಥೆ, 15ರಿಂದ 20 ಮಳಿಗೆಗಳನ್ನು ಹಾಕುವ ಅವಕಾಶ ನೀಡಲಾಗಿದೆ. ಎರಡು ದಿನಗಳ ಕಾಲ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ ಉಪಾಹಾರ ಮದ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 1500 ಮಂದಿ ಉಪಹಾರ ಸೇವಿಸುವ ನಿರೀಕ್ಷೆ ಇದ್ದು, ಮಧ್ಯಾಹ್ನ 3500 ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಕಾರ್ಯಕ್ರಮಕ್ಕೆ ಧಕ್ಕೆ ಬಾರದಂತೆ ಸುಸೂತ್ರವಾಗಿ ನಡೆಯುವಂತಾಗಲು ಸಕಲ ಸಿದ್ದತೆಯನ್ನು ಕೈಗೊಳ್ಳಲಾಗುತ್ತಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!