ಜಿಲ್ಲಾ ನೆಹರು ಯುವ ಕೇಂದ್ರದಿಂದ ಸ್ಪರ್ಧೆಗಳ ಆಯೋಜನೆ.
ದಾವಣಗೆರೆ : ಜಿಲ್ಲಾ ನೆಹರು ಯುವ ಕೇಂದ್ರದಿಂದ 2022-23 ನೇ ಸಾಲಿನ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸ್ಪರ್ಧೆಗಳ ವಿವರ: ಪೇಂಟಿಂಗ್, ಕವನ ಬರವಣಿಗೆ, ಮೊಬೈಲ್ ಫೋಟೋಗ್ರಫಿ, ಸಾಂಸ್ಕೃತಿಕ ಜನಪದ ಮತ್ತು ಸಾಂಪ್ರದಾಯಿಕ ನೃತ್ಯ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸ್ಪರ್ಧೇಯಲ್ಲಿ ಭಾಗವಹಿಸುವವರು 15 ರಿಂದ 29 ವರ್ಷ ವಯೋಮಾನದವರಾಗಿರಬೇಕು. ಒಬ್ಬರಿಗೆ ಒಂದು ಸ್ಪರ್ಧೆಗೆ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ. ಮತ್ತು ಸ್ಪರ್ಧೇಯ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ಹೆಸರನ್ನು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರ ಕಾರ್ಯಾಲಯ , ಜಿಲ್ಲಾದಿಕಾರಿಗಳ ಕಾರ್ಯಾಲಯ ಕಟ್ಟಡದ ಕೊಠಡಿ ಸಂಖ್ಯೆ 42 ರ üನೆಹರು ಯುವ ಕೇಂದ್ರ ಕಾರ್ಯಾಲಯ ಅಥವಾ ಮೊ. ಸಂ. 9901863789 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.