ಸಿದ್ದೇಶ್ವರ ಶ್ರೀಗಳ ಕೊನೆಯ ಆಶಯದಂತೆ ಸಮ್ಮೇಳನ.! ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಕ್ಷಣಗಣನೆ

ಸಿದ್ದೇಶ್ವರ ಶ್ರೀ
ವಿಜಯಪುರ: ‘ನಮ್ಮ ಮಂದಿ ಚುರುಕಾಗಿದ್ದಾರೆ. ಅವರೆಲ್ಲ ಸೇರಿ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ತುಂಬ ಚಂದ ಮಾಡಲಿದ್ದಾರೆ’ ಎಂದು ಈ ಭಾಗದ ನಿಜ ಸಂತ ಶ್ರೀ ಸಿದ್ದೇಶ್ವರ ಶ್ರೀಗಳು ತಮ್ಮ ಕೊನೆಯ ಆಶಯವಾಗಿ ಸಮ್ಮೇಳನಕ್ಕೆ ಹರಸಿದ್ದು, ಇದು ಅವರ ನುಡಿಯಂತೆ ಐತಿಹಾಸಿಕವಾಗಲಿದೆ ಎಂದು ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಭಾವುಕರಾಗಿ ಹೇಳಿದರು.
ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ನಡೆದ ಸಮ್ಮೇಳನದ ಕೊನೆಯ ಕ್ಷಣದ ತಯಾರಿ ಪರಿಶೀಲಿಸಿ ಮಾತನಾಡಿದರು. ಮೂವತ್ತೇಳನೆಯ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ಬಸವ ನಾಡಾದ ಇಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಬೆಂಗಳೂರು ಕಡೆ ಎಲ್ಲ ಹೋಗುತ್ತಿಸುರುವುದು ಉಲ್ಟಾ ಆಗಿ ಈಗ ಗಡಿ ಭಾಗದ ಈ ಇತಿಹಾಸ ಪ್ರಸಿದ್ಧ ನಗರದಲ್ಲಿ ಸಮ್ಮೇಳನ ನಡೆಯುತ್ತಿದೆ, ರಾಜ್ಯದ ಪ್ರಮುಖ ಪತ್ರಕರ್ತರು ಸೇರಿ ಸಾವಿರಾರು ಪತ್ರಕರ್ತರು ಇಲ್ಲಿ ಮೇಳೈಸಲಿದ್ದಾರೆ. ಎಲ್ಲರಿಗೂ ಅಗತ್ಯ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಂದವರಿಗೆಲ್ಲ ‘ಬಿಜಾಪುರದ ಜವಾರಿ ಊಟ’ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಅನೇಕ ಸಚಿವರು ಭಾಗವಹಿಸಲಿದ್ದಾರೆ ಎಂದು ಹೇಳೀದರು.
ಸಮ್ಮೇಳನವನ್ನು ಎಲ್ಲರೂ ಮನೆಯ ಕಾರ್ಯಕ್ರಮದಂತೆ ಭಾವಿಸಿ ರೂಪಿಸಬೇಕು. ಇದರಿಂದ ಜಿಲ್ಲೆಗೆ ವಿಶೇಷ ಹೆಸರು ಬರಲಿದೆ. ಈಲ್ಲೆಯ ಪತ್ರಕರ್ತರಿಗೆ ನೋಂದಣೀ ಅಗ್ಯವಿಲ್ಲ. ಹೊರಗಿನಿಂದ ಬರುವ ಪ್ರತಿನಿಧಿಗಳಿಗೆ ಮೂನ್ನೂರು ರೂ. ಪಡೆದು ನೋಂದಣಿ ಮಾಡಿಕೊಳ್ಳಲಾಗುವುದು. ಸಮ್ಮೇಳನ ಮುಗಿವವರೆಗೆ ಯಾರೂ ಮೈಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಕೊಡಗಿನ ಅಜ್ಜಮಾಡು ರಮೇಶ ಕಟ್ಟಪ್ಪ ಮಾತನಾಡಿ, ವಿಜಯಪುರದ ಜನ ಹೃದಯ ವೈಶಾಲ್ಯವಿರುವವರು ಎನ್ನುವುದಕ್ಕೆ ಎಷ್ಟೇ ಜನ ಬಂದರೂ ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡುತ್ತೇವೆ. ಯಾವ ಕೊರತೆಯೂ ಆಗಲ್ಲ ಎಂದಿರುವುದೇ ಸಾಕ್ಷಿ. ಈಗಾಗಲೇ ಬರುವ ಅನೇಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದು, ಇನ್ನೂ ನೂರಾರು ಜನಕ್ಕೆ ರೂಮುಗಳನ್ನು ಕಾಯ್ದಿರಿಸಿದ್ದು ಖುಷಿ ತಂದಿದೆ. ಹೀಗೆಯೇ ಎಲ್ಲರೂ ಒಟ್ಟಾಗಿ ದುಡಿದರೆ ಸಮ್ಮೇಳನ ಖಂಡಿತ ಯಶಸ್ವಿಯಾಗುತ್ತದೆ. ನಮ್ಮ ಕೊಡಗಿನವರಂತೆ ಬಿಜಾಪುರದ ಮಂದಿಯೂ ಯೋಧರಂತೇ ಇದ್ದಾರೆ. ಆ ಲಕ್ಷಣ ಕಾಣುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸದರು.
ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಮಾತನಾಡಿ, ಗುಲ್ಬರ್ಗ ಸಮ್ಮೇಳನದ ಅನುಭವ ಹಂಚಿಕೊAಡು ಹಲವು ಸಲಹೆಗಳನ್ನು ನೀಡಿದರು. ಇದೊಂದು ಮನೆಯ ಕಾರ್ಯಕ್ರಮದ ತರಹ ನಾವೆಲ್ಲ ಶ್ರಮಿಸಬೇಕು ಎಂದರು.
ವಸತಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು, ರಾಜ್ಯ ಸದಸ್ಯ ಡಿ.ಬಿ.ವಡವಡಗಿಯವರು ಮತ್ತು ಸಾರಿಗೆ ಸಮಿತಿಯ ಮುಖ್ಯಸ್ಥ ಇರ್ಫಾನ್ ಶೇಖ್ ವಸತಿ, ಸಾರಿಗೆ ಮತ್ತು ನೋಂದಣಿ ಕಾರ್ಯಗಳ ವಿವರ ನೀಡಿದರು. ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಕೌಶಲ್ಯ ಪಳಾನಕರ್, ಶಿವಕುಮಾರ್ ಉಪ್ಪಿನ, ವಾಲೀಖಾರ್, ಗಿರಿಜಾ ಕನಮಡಿ, ಎಸ್.ಬಿ.ಪಾಟೀಲ, ಅಶೋಕ ಯಡ್ಡಳ್ಳಿ, ನವೀದ್ ಮಮದಾಪುರ, ಷಡಕ್ಷರಿ ಕಂಪು, ಮೋಹನ್ ಕುಲಕರ್ಣಿ, ಗುರುರಾಜ ಲೋಕುರೆ, ವಿಠ್ಠಲ ಲಂಗೋಟಿ, ಬಾಲು ಸಾರವಾಡ, ಸದ್ದಾಮ್ ಜಮಾದಾರ್, ಫಿರೋಜ್ ರೋಜಿಮದಾರ್, ಅಲ್ಲಾಬಕ್ಷ ಗೋರೆ, ಅಜಯ್ ಕುಲಕರ್ಣಿ, ಸಂಜಯ್, ರಾಹುಲ್ ಆಪ್ಟೆ, ಮಾಧವರಾವ ಕುಲಕರ್ಣಿ, ಪವನ್ ಅನೇಕರು ಇದ್ದರು.