ಗರುಡವಾಯ್ಸ್ Exclusive ground report
ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ 200ಕ್ಕೂ ಹೆಚ್ಚು ಅಲೆಮಾರಿ-ಅರೆಮಾರಿ ಜನಾಂಗದ ಜನರು ಸುಡಾನ್ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಿಕ್ಕಿಹಾಕಿಕೊಂಡು ಆಹಾರ, ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ.
ಸೂಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆ ನಡುವೆ ಸಂಘರ್ಷ ಕಳೆದ ಕೆಲವು ದಿನಗಳಿಂದೂ ಸಂಘರ್ಷ ನಡೆಯುತ್ತಿದ್ದು, ನೂರಾರು ಜನರು ಸಾವನ್ನಪ್ಪಿದ್ದಾರೆ. ಹಲವರು ನಿರಾಶ್ರಿತರಾಗಿದ್ದಾರೆ.
ನಿರಾಶ್ರಿತರಾದವರ ಸಾಲಿನಲ್ಲಿ ಭಾರತೀಯ ಮೂಲದವರೂ ಇದ್ದು, ಚನ್ನಗಿರಿ ತಾಲೂಕಿನ 200 ಜನರು ಸೇರಿರುವುದಾಗಿ ವರದಿಯಾಗಿದೆ. ಆಹಾರ ನೀರು ಇಲ್ಲದೆ ಘರ್ಷಣೆ ನಡೆಯುವ ಪ್ರದೇಶದಲ್ಲಿ ಈ ಬುಡಕಟ್ಟು ಜನರು ಜೀವನ ನಡೆಸುತ್ತಿದ್ದಾರೆ.
ಇವರೆಲ್ಲಾ ಚನ್ಮಗಿರಿ ತಾಲ್ಲೂಕಿನ ಗೋಪನಾಳ್, ಅಸ್ಥಪ್ಪನಳ್ಳಿ ಗ್ರಾಮದ ಹಕ್ಕಿ ಪಿಕ್ಕಿ ಜನಾಂಗದವರು ಎನ್ನಲಾಗಿದ್ದು, ಎರಡು ಮೂರು ದಿನದಿಂದ ಸರಿಯಾದ ನೀರು, ಆಹಾರ ಸಾಮಗ್ರಿಗಳು ಇಲ್ಲದೆ ಊಟೋಪಚಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲದೆ ಕೋರಗುತ್ತಿದ್ದಾರೆ.
ವೀಡಿಯೋ ಒಂದನ್ನು ಮಾಡಿರುವ ಈ ಜನರು ತಮ್ಮ ವಾಸಸ್ಥಳ ಹಾಗೂ ಅಲ್ಲಿನ ಭೀಕರ ಪರಿಸ್ಥಿತಿಯನ್ನು ಪರಿಚಯಿಸಿ, ಮಕ್ಕಳು,ಮಹಿಳೆಯರು ಸೇರಿದಂತೆ ಕುಟುಂಬವನ್ನು ರಕ್ಷಿಸುವಂತೆ ಕೋರಿಕೊಂಡಿದ್ದಾರೆ.
ಚನ್ನಗಿರಿ ತಾಲ್ಲೂಕೊಂದರಲ್ಲಿಯೇ ಸೂಮಾರು 200-300 ಕ್ಕೂ ಹೆಚ್ಚು ಜನರು ತಮ್ಮ ಮಕ್ಕಳ ಜೊತೆ ಈ ಹಕ್ಕಿ ಪಿಕ್ಕಿ ಬುಡಕಟ್ಟು ಜನರು ಕಳೆದ 8 ತಿಂಗಳಿ ಹಿಂದೆ ಸುಡಾನ್ ದೇಶದಲ್ಲಿ ವ್ಯಾಪಾರಮಾಡಲು ತೆರಳಿದ್ದರು. ಇದೀಗ ಸಿವಿಲ್ ವಾರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸರಬರಾಜು ಇಲ್ಲದೆ ಸರ್ಕಾರದ ಸಹಾಯ ಕೋರುತ್ತಿದ್ದಾರೆ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
