ರಾಜ್ಯದಲ್ಲಿ ಇನ್ನೂ 10 ವರ್ಷ ಕಾಂಗ್ರೆಸ್ ಗ್ಯಾರಂಟಿ ನಾಸಿರ್, ಯತ್ನಾಳ್ ಬಗ್ಗೆ ಏನೂ ಹೇಳಲ್ಲ : ರಾಮಲಿಂಗ ರೆಡ್ಡಿ
ದಾವಣಗೆರೆ: ರಾಜ್ಯದಲ್ಲಿ ಇನ್ನೂ 10 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ. ಅದರಲ್ಲಿ ಯಾವುದೇ ಡೌಟ್ ಬೇಡ. ಅಲ್ಲದೇ ಗ್ಯಾರಂಟಿ ಯೋಜನೆಗಳು ಅಲ್ಲಿಯವರೆಗೂ ಮುಂದುವರೆಯಲಿದೆ ಎಂಬುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯವರು ಉಳ್ಳವರ ಪರವಾಗಿದ್ದರೇ, ನಾವು ಬಡವರ ಪರವಾಗಿದ್ದೇವೆ.ಇದನ್ನು ಸಹಿಸಲಾಗದೇ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ರಾಜ್ಯದಲ್ಲಿ ಈಗ ಯಾವೇದು ಕಾನೂನು ಸುವ್ಯವಸ್ಥೆಯ ಸಮಸ್ಯೆಯಿಲ್ಲ ಎಂಬುದಾಗಿ ತಿಳಿಸಿದರು.
ನಾಸೀರ್ ಹುಸೇನ್ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ, ಯತ್ನಾಳ್, ಸಿಟಿ ರವಿ, ಈಶ್ವರಪ್ಪ ಬಗ್ಗೆ ನಾನು ಮಾತನಾಡೋದಿಲ್ಲ. ನೀವು ಟಿವಿಯಲ್ಲಿ ತೋರುಸುತ್ತಿರಿ ಅಂತ ಅವರು ಮಾತನಾಡುತ್ತಾರೆ ಎಂದು ಹೇಳಿದರು.