ದಾವಣಗೆರೆ : ಭಾವನೆ, ಸಂಸ್ಕೃತಿ ಸಂಪ್ರದಾಯಕ್ಕೆ ವಿರುದ್ಧವಾಗಿ ಧರ್ಮ ವನ್ನ ಮುಂದಿಟ್ಟುಕೊಂಡು ರಾಜಕೀಯ ಮಾಡುವಂತ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಧರ್ಮ ದೇಶ ಸಂಸ್ಕೃತಿ ಉಳಿಸುವ ಭಜರಂಗ ದಳ ನಿಷೇಧ ಮಾಡಿದರೆ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ.ಸೋಲಿನ ಭಯದಿಂದ ಕಾಂಗ್ರೆಸ್ ಧರ್ಮವನ್ನ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದೆ ಇದು ಪ್ರಯೋಜನವಾಗಲ್ಲ ಎಂದು ಜಿಲ್ಲಾ ಶೋಷಿತ ವರ್ಗಗಳ ಮುಖಂಡರಾದ ಬಾಡದ ಅನಂದರಾಜು ಖಂಡಿಸಿದ್ದಾರೆ. ನಾವು ಬಡವರ ಪರ ಎನ್ನುವ ಕಾಂಗ್ರೆಸ್ ಹಿಂದೂ ಸಂಘಟನೆಗಳನ್ನ ಟಾರ್ಗೇಟ್ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಹಗಲ ಕನಸು ಕಾಣುತ್ತಿದೆ. ಇದರಿಂದ ಕಾಂಗ್ರೆಸ್ ಎಲ್ಲಾ ಕಡೆ ಸೋಲುತ್ತದೆ ಬಿಜೆಪಿ ಪಕ್ಷ ಎಂದೂ ಜಾತಿ ರಾಜಕಾರಣ ಮಾಡಿಲ್ಲ ಕಾಂಗ್ರೆಸ್ ಜಾತಿ ಮೇಲೆ ರಾಜಕೀಯ ಮಾಡಲು ಮುಂದಾಗಿದೆ ಜೊತೆಗೆ ಧರ್ಮವನ್ನ ಮುಂದಿಟ್ಟುಕೊಳ್ಳಲು ಯತ್ನಿಸುತ್ತಿದೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ತರಲು ಮುಂದಾಗುತ್ತಿದೆ. ಬಿಜೆಪಿ ಎಂದೂ ಧರ್ಮ ಜಾತಿ ಮೇಲೆ ಟಿಕೆಟ್ ನೀಡಿಲ್ಲ ಯೋಗ್ಯತೆ ಮೇಲೆ ಕೆಲವರಿಗೆ ಟಿಕೆಟ್ ನೀಡಿದೆ. ಸಾಮಾನ್ಯ ವ್ಯಕ್ತಿ ಹಾಗೂ ಸಾಮಾನ್ಯ ಕಾರ್ಯಕರ್ತನ ಪರ ಇಡೀ ದಾವಣಗೆರೆ ಜನರು ಪ್ರಚಾರ ಮಾಡುತ್ತಿದ್ದಾರೆ. ಧರ್ಮ ಮತ್ತು ದೇಶಭಕ್ತ ಸಂಘಟನೆಗಳನ್ನ ನಿಷೇಧ ಮಾಡಿದರೆ ಮೇ 10 ರ ನಂತರ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಿ ಜನರೇ ಮಾಡುತ್ತಾರೆ ಎಂದು ಕಾಂಗ್ರೆಸ್ ಗೆ ಖಾರವಾಗಿ ಬಾಡದ ಅನಂದರಾಜು ಟಾಂಗ್ ನೀಡಿದ್ದಾರೆ.
