ಕಾಂಗ್ರೆಸ್ ಕಚೇರಿಯ ಗಣೇಶ ಮೂರ್ತಿಯನ್ನ ಸರಳವಾಗಿ ವಿಸರ್ಜನೆ
ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವು ಸರಳವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇವರೊಂದಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ ಶೆಟ್ಟಿ, ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಅನಿತಾ ಬಾಯಿ, ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಡೋಲಿ ಚಂದ್ರು, ಇಂಟಕ್ ಅಧ್ಯಕ್ಷರಾದ ಮಂಜುನಾಥ್, ಕಿಸಾನ್ ಘಟಕದ ಬಾತಿ ಶಿವಕುಮಾರ್, ಅಲ್ಪಸಂಖ್ಯಾತ ಘಟಕದ ರಿಯಾಜುದ್ದೀನ್ ಮತ್ತಿತರರು ಭಾಗವಹಿಸಿದ್ದರು.