ಜನವರಿ 8ಕ್ಕೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್ಸಿಎಸ್ಟಿ ಐಕ್ಯತಾ ಸಮಾವೇಶ

ದಾವಣಗೆರೆ: ಚಿತ್ರದುರ್ಗದ ಚಳ್ಳಕೆರೆ ತಿರುವಿನಲ್ಲಿ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶವನ್ನು ಇದೇ ಜನವರಿ 8ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಸ್ಸಿ-ಎಸ್ಟ ಮುಖಂಡ ಮಂಜುನಾಥ್ ಆಲ್ಲರಿ ತಿಳಿಸಿದರು.
ಪೂಜಾ ಇಂರ‍್ಟಾö್ಯಷನಲ್ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭಗೊಳ್ಳಲಿದ್ದು , ಜಿ.ಪರಮೇಶ್ವರ್ ,ಕೆ.ಹೆಚ್.ಮುನಿಯಪ್ಪ , ಸತೀಶ್ ಜಾರಕಿಹೊಳಿ , ಪಿ.ಟಿ.ಪರಮೇಶ್ವರ್ ನಾಯಕ್ , ಹೆಚ್.ಆಂಜನೇಯ ಸೇರಿದಂತೆ ಅನೇಕ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಾವೇಶಕ್ಕೆ ರಾಜ್ಯದೆಲ್ಲೆಡೆಯಿಂದ 5 ರಿಂದ 6ಲಕ್ಷ ಜನರು ಆಗಮಿಸಲಿದ್ದು ,ದಾವಣಗೆರೆಯ 6 ತಾಲ್ಲೂಕುಗಳಿಂದ 10 ಸಾವಿರ ಜನರು ಸಮಾವೇಶಕ್ಕೆ ಬರಲಿದ್ದಾರೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ , ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಾಯಕತ್ವದಲ್ಲಿ ಸಮಾವೇಶ ನಡೆಸಲಾಗಿತ್ತಿದೆ. ಎಲ್ಲ ಸಮಾಜಗಳ ಮುಖಂಡರು , ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಎಸ್ಸಿ-ಎಸ್ಟಿ ವಿಭಾಗದ ರಾಜ್ಯ ಮುಖಂಡ ಶ್ರೀಕಾಂತ್ ಮಾತನಾಡಿ , ಸಂವಿಧಾನದ ಉಳಿವು , ಮೀಸಲಾತಿ ರಕ್ಷಣೆ ಹಾಗೂ ನಮ್ಮ ಹಕ್ಕುಗಳ ರಕ್ಷಣೆಯ ಹೋರಾಟದ ಸಂಕಲ್ಪಕ್ಕಾಗಿ ಈ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆಯೂ ತಿಳಿಸಿಕೊಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!