ಕಾಂಗ್ರೆಸ್ ಸೇರಿ ಯಾವುದೇ ಪಕ್ಷಗಳು ಜೆಡಿಎಸ್ ಗೆ ಪೆಟ್ಟು ಕೋಡೋಕೆ ಸಾಧ್ಯವಿಲ್ಲ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್, ಬಿಜೆಪಿಯ ದುರಾಡಳಿತ್ತಕ್ಕೆ ಬೇಸತ್ತಿರುವ ರಾಜ್ಯದ ಜನರು ಜೆಡಿಎಸ್ ಕಡೆಗೆ ವಾಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚು ಸ್ಥಾನ ಗಳಿಸುವುದು ಖಚಿತ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮೊನ್ನೆ ಹುಬ್ಬಳ್ಳಿ, ಗದಗ, ಹಾವೇರಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಾಗ ಅಲ್ಲಿನ ಜನರು ಜೆಡಿಎಸ್ ಬಗ್ಗೆ ಒಲವು ತೋರಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಬಿಜೆಪಿ, ಕಾಂಗ್ರೆಸ್ ಗಿಂತ ಹೆಚ್ಚು ಸ್ಥಾನ ಗಳಿಸುವುದು ಶತಸಿದ್ಧ ಎಂದರು.
ಹಳೇ ಕರ್ನಾಟಕ ಭಾಗ ಸೇರಿ ಉತ್ತರ ಕರ್ನಾಟಕ ಜನತೆ ಸದ್ಯಕ್ಕೆ ಜೆಡಿಎಸ್ ಕಡೆಗೆ ವಾಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಆಡಳಿತ ನೋಡಿ ಬೇಸತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ನವರು ಈಗಾಗಲೇ ನಮ್ಮ ಪಕ್ಷದವರನ್ನು ಸೆಳೆಯುತ್ತಿದ್ದಾರೆ. ಆದರೆ, ಕಾಂಗ್ರೇಸ್ ಸೇರಿ ಯಾವುದೇ ಪಕ್ಷಗಳು ಜೆಡಿಎಸ್ ಗೆ ಪೆಟ್ಟು ಕೊಡಲು ಸಾಧ್ಯವಿಲ್ಲ ಎಂದರು.