ದುಡಾ ದಿಂದ 1.80.ಕೋಟಿ ಅನುದಾನದ ಅಡಿ ವಿವಿಧ ಅಭಿವೃದ್ಧಿ ಕಾಮಾಗಾರಿಗಳಿಗೆ ಶಂಕುಸ್ಥಾಪನೆ
ದಾವಣಗೆರೆ: ದಾವಣಗೆರೆ -ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 1.80 ಕೋಟಿ ₹ ಗಳ ಜೆ.ಎಚ್.ಪಟೇಲ್ ಬಡಾವಣೆ ರಸ್ತೆ ,ಬೆಳಕಿನ ವ್ಯವಸ್ಥೆ,ನಾಮ ಫಲಕದ ಕಮಾನು ನಿರ್ಮಿಸುವುದು,ಜೆ.ಎಚ್.ಪಟೇಲ್ ಬಡಾವಣೆಯ ಎ.ಬಿ.ಸಿ.ಡಿ.ಮತ್ತು ಇ ಬ್ಲಾಕ್ ರಸ್ತೆಗಳ ಹೆಸರುಗಳನ್ನು ಸೂಚಿಸುವ ನಾಮಫಲಕ ಅಳವಡಿಸುವುದು ಶ್ರೀ ದೇವರಾಜ್ ಅರಸು ಬಡಾವಣೆಯಲ್ಲಿ ಪಿ.ಬಿ.ರಸ್ತೆ ಅಭಿಮುಖವಾಗಿ ಕಮಾನ ನಿರ್ಮಿಸುವುದು ಅನೇಕ ಅಭಿವೃದ್ಧಿ ಕಾಮಾಗಾರಿಗಳಿಗೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರು ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಧೂಡಾ ಅಧ್ಯಕ್ಷರಾದ ದೇವರಮನೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಧೂಡಾ ಸದಸ್ಯರಾದ ಗೌರಮ್ಮ ಪಾಟೀಲ್, ಭಾತಿ ಚಂದ್ರಶೇಖರ, ಆರ್ ಲಕ್ಷ್ಮಣ, ಮಾರುತಿರಾವ್ ಘಾಟ್ಗೆ,ಮಹಾನಗರ ಪಾಲಿಕೆ ಸದಸ್ಯರಾದ ಕಲ್ಲಹಳ್ಳಿ ನಾಗರಾಜ್,ಆಶಾ ಉಮೇಶ್, ಎನ್.ಎಲ್.ಕಲ್ಲೇಶ್, ಮುರುಗೇಶ್ ಆರಾಧ್ಯ, ಪ್ರಾಧಿಕಾರದ ಆಯಕ್ತರಾದ ಬಿ.ಟಿ ಕುಮಾರ ಸ್ವಾಮಿ,ಕಾರ್ಯಪಾಲಕ ಅಭಿಯಂತರರಾದ ಕೆ.ಎಚ್.ಶ್ರೀಕರ,ಸೃಜಯ್, ಅಕ್ಷತಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.