ರಷ್ಯಾ, ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳಿಗಾಗಿ ದಾವಣಗೆರೆಯಲ್ಲಿ ಕಂಟ್ರೋಲ್ ರೂಂ
ದಾವಣಗೆರೆ : ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು, ಉಕ್ರೇನ್ ದೇಶದಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಕ್ಕಾಗಿ ನೆಲೆಸಿರುವ ದಾವಣಗೆರೆ ಜಿಲ್ಲೆಯ ಭಾರತದ ಪ್ರಜೆಗಳ ಸುರಕ್ಷತೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.
ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 1077/08192-234034 ಹಾಗೂ ಜಯಣ್ಣ ಜಿ. ಟಿ. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು, ಮೊಬೈಲ್ ಸಂಖ್ಯೆ 9844074327ಗೆ ಸಂಬಂಧಪಟ್ಟವರು ಮಾಹಿತಿ ನೀಡಬಹುದು. ಹಾಗೂ ವೆಬ್ಸೈಟ್ http:/ukraine.karnataka.tech/stranded ರಲ್ಲಿ ಮಾಹಿತಿ ದಾಖಲಿಸಲು ತಿಳಿಸಲಾಗಿದೆ.