ದಾವಣಗೆರೆ: ಭಜರಂಗದಳ ಬ್ಯಾನ್ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಹೊರಡಿಸಿರುವ ಕಾಂಗ್ರೆಸ್ ವಿರುಧ್ಧ ನಗರದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಇಂದು ನಡೆದ ಜಾಥಾದಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರನ್ನ ಬಂಧಿಸಿ ಬಿಡಿಗಡೆ ಮಾಡಿದ ಘಟನೆ ನಡೆಯಿತು.
ಪ್ರತಿಭಟನೆಯ ಜಾಥಾಗೆ ನಗರದ ವಿವಿಧ ಮೂಲೆಗಳಿಂದ ಪಥ ಸಂಚಲನ ಮೂಲಕ ಸೇರಿದ ಸಾವಿರಾರು ಕಾರ್ಯಕರ್ತರನ್ನ ಗುಂಡಿ ವೃತ್ತದಲ್ಲಿ ಪೊಲೀಸರು ತಡೆದರು. ಈ ವೇಳೆ ಪೊಲೀಸ್ ಜೊತೆ ಕಾರ್ಪೊರೇಟರ್ ಪ್ರಸನ್ನ ಕುಮಾರ್ ಹಾಗೂ ಹಿಂಧೂ ಮುಖಂಡ ಸತೀಶ ಪೂಜಾರಿ, ಮಾಜಿ ಮೇಯರ್ ವಿರೇಶ್, ರಾಜಶೇಖರ್, ಕಲ್ಲೇಶ್, ದಂಡಪಾಣಿ, ಚಂದ್ರಶೇಖರ್, ಹರೀಶ್ ಶಾಮನೂರು ಇವರ ಮಧ್ಯೆ ವಾಗ್ವಾದ ನಡೆಯಿತು, ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಪ್ರಸನ್ನ ಕುಮಾರ್ ನಾವು ಹಿಂದೂ ಜನ ಜಾಗೃತಿ ಸಮಿತಿ ಹೆಸರಲ್ಲಿ ಈಗಾಗಲೇ ಅನುಮತಿ ಕೋರಿ 2 ದಿನದ ಹಿಂದೇಯೇ ಚುನಾವಣಾಧಿಕಾರಿಗೆ ಮನವಿ ನೀಡಿದ್ದೆವು, ಇದಕ್ಕೆ ಯಾವುದೇ ಲಿಖಿತ ಉತ್ತರ ನೀಡದೆ ಇಂದು ಅನುಮತಿ ಇಲ್ಲ ಎಂದು ತಡೆಯುವುದು, ಕುತಂತ್ರ. ಇದು ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ, ಧಾರ್ಮಿಕ ಕಾರ್ಯಕ್ರಮ. ಅನುಮತಿ ಯಾಕೆ ನೀಡಲಿಲ್ಲಾ ಎಂದು ಪ್ರತಿಭಟಿಸಿದರು.
ಈ ವೇಳೆ ಕಾರ್ಯಕರ್ತರನ್ನ ಚದುರಿಸಿ ಮುಖಂಡರನ್ನು ನಗರದ ಪೊಲೀಸ್ ಕವಾಯತ್ ಮೈದಾನಕ್ಕೆ ಕರೆದುಕೊಂಡು ಬರಲಾಯಿತು. ನಂತರ ಕವಾಯತ್ ಮೈದಾನಕದಕೆ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಪೊಲೀಸರು ಜೊತೆ ಮಾತನಾಡಿದರು.ಚುನಾವಣಾ ನಿಯಮವನ್ನ ಉಲ್ಲಂಘಿಸಿರುವ ಬಗ್ಗೆ ಎಲ್ಲರಿಂದ ಮುಚ್ಚಳಿಕೆ ಬರೆಸಿಕೊಂಡ ಬಿಡುಗಡೆ ಮಾಡಲಾಯಿತು.
