ಪಾಲಿಕೆ ಜಾಗದಲ್ಲಿದ್ದ ಧಾರ್ಮಿಕ ಕಟ್ಟೆಯನ್ನ ತೆರವುಗೊಳಿಸಿದ ಪಾಲಿಕೆ ಆಯುಕ್ತರ ನೇತೃತ್ವದ ತಂಡ: ಸ್ಥಳದಲ್ಲಿ ಪೋಲೀಸ್ ನಿಯೋಜನೆ

ದಾವಣಗೆರೆ: ಅಕ್ರಮವಾಗಿ ನಗರ ಪಾಲಿಕೆ ಜಾಗದಲ್ಲಿ ಕಟ್ಟಲಾಗಿದ್ದ ಜೆಂಡೆ ಕಟ್ಟೆಯನ್ನು ಇಂದು ಪಾಲಿಕೆ ಅಧಿಕಾರಿಗಳು ತೆರವು ಮಾಡಿದರು.
ನಗರದ ವಸಂತ ರಸ್ತೆಯಲ್ಲಿನ ಎಂ.ಬಿ. ಕೇರಿಯಲ್ಲಿ ಅಕ್ರಮವಾಗಿ ಪಾಲಿಕೆ ಜಾಗದಲ್ಲಿ ಕಟ್ಟಿದ್ದ ಧಾರ್ಮಿಕ ಕಟ್ಟೆ, ಬೇವಿನ ಮರದ ಬಳಿ ಬಾಗಿಲು ನಿರ್ಮಿಸಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕಾರಣ ಜೆಸಿಬಿಯಿಂದ ಕಟ್ಟೆಯನ್ನು ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ತೆರವು ಮಾಡಿದರು.
ಯಾರಿಗೂ ಮಾಹಿತಿ ನೀಡದೆ ನಮ್ಮ ಸಮುದಾಯದ ಕಟ್ಟೆಯನ್ನ ಧ್ವಂಸ ಮಾಡಿದ್ದಾರೆ. ಕೇರಿಯಲ್ಲಿ ಯಾರು ಮನೆಯಿಂದ ಹೊರಗೆ ಬರಬಾರದೆಂದು ಮನೆ ಲಾಕ್ ಮಾಡಿ ಕಟ್ಟೆಯನ್ನು ಹೊಡೆದಿದ್ದಾರೆ. ನಮ್ಮ ಕೇರಿಯಲ್ಲಿ ಎಲ್ಲಾ ಧರ್ಮದವರು ಒಂದೆ ಕುಟುಂಬದಂತೆ ಇದ್ದೇವೆ
ಸುಮಾರು 40 ವರ್ಷಗಳ ಹಿಂದಿನ ಕಟ್ಟೆ ಇದು ಎಂದು ಪೊಲೀಸರಿಗೆ ಸಮುದಾಯದ ಕೆಲ ಯುವಕರು ತರಾಟೆಗೆ ತೆಗೆದುಕೊಂಡರು.
