ಅವ್ಯವಹಾರದ ಕೂಪವಾದ ಬಿ ದುರ್ಗ ಗ್ರಾಮ ಪಂಚಾಯತಿ : ಗ್ರಾಪಂ ಸದಸ್ಯರ ಜೇಬಿಗೆ ಸೇರುತ್ತಿದೆ ನರೇಗಾ ಹಣ!?

ಚಿತ್ರದುರ್ಗ: ಗ್ರಾಮೀಣ ಪ್ರದೇಶದ ದುಡಿಯುವ ವರ್ಗಕ್ಕೆ ಅನ್ನ ನೀಡುವ ಉದ್ದೇಶದಿಂದ ಜಾರಿಗೆ ತರಲಾದ ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯು ಪ್ರಾರಂಭವಾದಂದಿನಿಂದ ಅವ್ಯವಹಾರ, ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ ಎಂಬ ಆರೋಪಗಳು ದಿನನಿತ್ಯ ಕೇಳಿಬರುತ್ತಲೇ ಇದೆ.!
ಈಗ ಇಂತಹದ್ದೇ ಒಂದು ಆರೋಪ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಗ್ರಾಮಪಂಚಾಯತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಇಂತಹ ಸರ್ಕಾರಿ ಯೋಜನೆಗಳನ್ನು ಬಳಸಿಕೊಂಡು ಹಣ ಸಂಪಾದಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನರೇಗಾದಡಿ ಮಾನವ ದಿನಗಳಲ್ಲಿ ಕಾಮಗಾರಿಯನ್ನು ಮಾಡಬೇಕು ಆದ್ರೆ ಇಲ್ಲಿ ಜೆಸಬಿ ಯಿಂದ ಕೆಲಸ ಮಾಡಿಸಿ ಮಾನವ ದಿನಗಳ ಲಕ್ಕದಲ್ಲಿ ಕೃಷ್ಣನ ಲೆಕ್ಕ ತೋರಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವ್ಯಕ್ತಿಗಳ ಹೆಸರಿಗೆ ಯಾವುದೊ ಸರ್ವೇ ನಂಬರ್ ತೊರಿಸಿ ಕೆಲಸ ಮಾಡಿದ್ದೆವೆ ಅಂತಿದ್ದಾರೆ. ಬಿ.ದುರ್ಗ ಗ್ರಾಮ ಪಂಚಾಯಿತಿ ಒಂದರಲ್ಲೇ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಶಂಕಿಸಲಾಗಿದ್ದು ತನಿಖೆಗಾಗಿ ಗ್ರಾಮದ ಇಂಜಿನಿಯರ್ ವಿರೇಶ್ ಗೌಡ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರಿಗೆ ದೂರು ಸಲ್ಲಿಸಿದ್ದಾರೆ.

ಗ್ರಾಪಂ ಸದಸ್ಯರು ಯಾರೂ ಪ್ರಶ್ನಿಸದ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಕೆಲವು ವ್ಯಕ್ತಿಗಳಿಂದ ಜಾಬ್-ಕಾರ್ಡ್, ಅವರು ಕೆಲಸ ಮಾಡಿರುವ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಕೆಲಸದ ಮಧ್ಯದಲ್ಲಿ ಪಿಕ್ಚರ್ಸ್ ಮತ್ತು ಜಿಪಿಎಸ್ ಅಗತ್ಯವಿರುತ್ತದೆ, ಆದ್ದರಿಂದ ಅವರು ಕೆಲವರ ಪರಿಚಿತ ಜನರನ್ನು ಕರೆತರುತ್ತಾರೆ ಮತ್ತು ಜನರು ಕೆಲಸ ಮಾಡಿದ್ದಾರೆ ಅಂತಾ ಪ್ರೂಫ್ಗಾಗಿ ಕೆಲಸ ಮಾಡಿದ್ದಾರೆ ಎಂದು ತೋರಿಸಲು ಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ. ಇವರಾಗಿಯೇ ಕರೆ ತಂದಿರುವ ಕೆಲಸಗಾರರ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಹಣವನ್ನು ಪುನಃ ವಾಪಸ್ ಪಡೆದುಕೊಳ್ಳುತ್ತಾರೆ ಎಂದು ಗ್ರಾಮದ ಮುಖಂಡ ವೀರೇಶ ಗೌಡ ಜಿ.ಎಂ ನೇರ ಆರೋಪ ಮಾಡಿದ್ದಾರೆ.

ಮನುಷ್ಯರು ಹೋಗಲು ಸಾಧ್ಯವಾಗದ ಕಡೆ ಜನರು ಕೆಲಸ ಮಾಡಿದ್ದಾರೆ ಎಂದು ತೋರಿಸುತ್ತಾರೆ. ಅಸಲಿಗೆ ಜೆಸಿಬಿಯಿಂದ ಕೆಲಸ ಮಾಡಿಸಿರುತ್ತಾರೆ. ಜೆಸಿಬಿ ಕೆಲಸಕ್ಕಾಗಿ 5 ಸಾವಿರ ರೂಪಾಯಿಗಳನ್ನು ಖರ್ಚು ಮಾಡುವುದರಿಂದ ಅವರು ಸರ್ಕಾರದಿಂದ ಲಕ್ಷಾಂತರ ರೂಪಾಯಿಗಳನ್ನು ದೋಚುತ್ತಿದ್ದಾರೆ. ಜಾಬ್-ಕಾರ್ಡ್ ನೀಡಿದವರಿಗೆ 500 ರೂಪಾಯಿಗಳನ್ನು ಕೊಡುವು ದರಿಂದ ಅವರು ಯಾವುದೇ ಕೆಲಸ ಮಾಡದೆ ಮನೆಯಲ್ಲಿ ಕುಳಿತುಕೊಂಡೇ ಹಣ ಬರುತ್ತದಲ್ಲ ಎಂದು ಈ ಅಕ್ರಮದ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಇಂತಹ ಯೋಜನೆಗಳು ಬಿ.ದುರ್ಗ ಗ್ರಾಮಪಂಚಾಯತ್ ಅಡಿಯಲ್ಲಿ ಅಸಂಖ್ಯಾತವಾಗಿವೆ. ಎನ್ಆರ್ ಐಜಿ ಅಡಿಯಲ್ಲಿ ನಡೆದಿರುವ ಇಂತಹ ಕೆಲಸಗಳ ಕುರಿತು ತನಿಖೆ ನಡೆಸಿ, ಅವ್ಯವಹಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅವರು ಕೋರಿದ್ದಾರೆ.