ದೇವನಗರಿ ದುಗ್ಗಮ್ಮ ದೇವಿ ಜಾತ್ರೆಗೆ ಕ್ಷಣಗಣನೆ, ಸಕಲ ಸಿದ್ದತೆ: ಜಾತ್ರೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು?

ದಾವಣಗೆರೆ : ಐತಿಹಾಸಿಕ ದುಗ್ಗಮ್ಮ ಜಾತ್ರೆಗೆ ಕ್ಷಣಗಣನೆ ಇದ್ದು, ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯಿಂದ ತೊಂದರೆಯಾಗದAತೆ ಮುಂಜಾಗ್ರತೆ ವಹಿಸಿ ಸಕಲ ಸಿದ್ದತೆಯನ್ನು ಮಾಡಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಹೇಳಿದರು. ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದ (ಮಾ.13) ಜಾತ್ರಾ ಮಹೋತ್ಸವ ಆರಂಭವಾಗಲಿದೆ. ನಾಳೆ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ನಂತರ ರಾತ್ರಿ ಸಾರು ಹಾಕುವ ಕಾರ್ಯಕ್ರಮ ಮಾ. 15ರಂದು ಬೆಳಿಗ್ಗೆ ದಾಸೋಹದ ಮಹೋಪಕರಣ ಸಮಾರಂಭೋತ್ಸವ, ರಾತ್ರಿ ಶ್ರೀ ಅಮ್ಮನವರಿಗೆ ಭಕ್ತಿ ಸಮರ್ಪಣೆ, ರಾತ್ರಿ 9 ರಿಂದ ಸಾಂಸ್ಕೃತಿಕ ಮೇಳ, ಡೊಳ್ಳು ಕುಣಿತ, ಸಿಡಿಮದ್ದಿನ ಪ್ರದರ್ಶನ ಜೊತೆಗೆ ಬೆಳ್ಳಿಯ ರಥದಲ್ಲಿ ಅಮ್ಮನವರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುಲಿದೆ. ಇನ್ನು ಮಾ. 16ರಂದು ಶ್ರೀ ದುರ್ಗಾಂಭಿಕಾ ದೇವಿಯವರ ಮಹಾಪೂಜಾ ಸಮಾರಂಭ ಹಾಗೂ ಬೆಳಿಗ್ಗೆ ಚರಗ ಚೆಲ್ಲುವ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಮಾ.18ರಂದು ದಿ. ಶ್ರೀಮತಿ ಶಾಮನೂರು ಪಾರ್ವತಮ್ಮ ಇವರ ಜ್ಞಾಪನಾರ್ಥಕವಾಗಿ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಕ್ಕಳು, ಮೊಮ್ಮಕ್ಕಳ ವತಿಯಿಂದ ಪ್ರಸಾದ ವ್ಯವಸ್ಥೆ ಇರಲಿದೆ. ಮಾ. 19ರಂದು ದಾವಣಗೆರೆ ಧರ್ಮಪ್ರವರ್ತಕ ರಾಜನಹಳ್ಳಿ ಹನುಮಂತಪ್ಪನವರ ಸವಿನೆನಪಿಗಾಗಿ ಧರ್ಮಪ್ರಕಾಶ ಆರ್. ರಾಮಶೆಟ್ಟರ, ಮೊಮ್ಮಕ್ಕಳು ಮತ್ತು ಆರ್. ಶ್ರೀನಿವಾಸಮೂರ್ತಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಇವರಿಂದ ಪ್ರಸಾದ ವ್ಯವಸ್ಥೆ ಇರುತ್ತದೆ. ಮಾ. 20ರಂದು ಮುದೇಗೌಡ್ರು ದಿ. ಪರಮೇಶ್ವರಪ್ಪ ದಿ. ಶ್ರೀಮತಿ ಲಲಿತಮ್ಮ ಇವರ ಜ್ಞಾಪಕಾರ್ಥವಾಗಿ ಮುದೇಗೌಡ್ರು ಸಿದ್ದರಾಜು, ಮುದೇಗೌಡ್ರು ಮುರುಗೇಶ್, ಮುದೇಗೌಡ್ರು ಗಿರೀಶ್, ಮುದೇಗೌಡ್ರು ಜಗದೀಶ್ ಇವರಿಂದ ಪ್ರಸಾದ ವ್ಯವಸ್ಥೆ ಇರಲಿದೆ. ಮಾ.18,19,20 ರಂದು ಮೂರು ದಿನನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಬಯಲು ಜಂಗಿ ಕುಸ್ತಿ : ಮಾ. 18ರಿಂದ 27ರವರೆಗೆ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ರಾತ್ರಿ 8 ಗಂಟೆಯಿAದ ಸುಪ್ರಸಿದ್ದ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.18ರಿಂದ 20 ರವರೆಗೆ ಪ್ರಸಿದ್ದ ಪೈಲ್ವಾನರುಗಳಿಂದ ಮಲ್ಲಯುದ್ದ, ಬಯಲು ಜಂಗಿ ಕುಸ್ತಿ ಹಮ್ಮಿಕೊಳ್ಳಲಾಗಿದೆ. ಈ ಕುಸ್ತಿ ಕಾಳಗದಲ್ಲಿ ಭಾಗಿಯಾಗುವ ಕುಸ್ತಿಪಟುಗಳಿಗೆ, ನೋಡಲು ಬಂದ ಪರಸ್ಥಳದ ಜನತೆಗಳಿಗೆ ಹಾಗೂ ವಸ್ತಾದಿಗಳಿಗೆ ಮೂರು ದಿನ ದಾಸೋಹವನ್ನು ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಒಳ್ಳೆಯ ಕುಸ್ತಿಪಟುಗಳಿಗೆ ಆಕರ್ಷಕ ಬಹುಮಾನ ಮತ್ತು ಹಣ ಕೊಡಲಾಗುತ್ತದೆ. ಕೊನೆಯ ದಿನ ಅಂದಾಜು 2 ಕೆಜಿ ತೂಕದ ಬೆಳ್ಳಿ ಗದೆಯನ್ನು ಬಹುಮಾನವಾಗಿ ಇಡಲಾಗಿದೆ. ಹೆಸರಾಂತ ದೊಡ್ಡ ಜೋಡಿಗಳಿಗೆ ಬೆಳ್ಳಿ ಗದೆ ಮತ್ತು 25 ಸಾವಿರ ರೂ. ಕೊಡಲಾಗುತ್ತದೆ.