ದಾವಣಗೆರೆ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇದೇ ಮೇ 13ರ ಶನಿವಾರ ಅನಾವರಣಗೊಳ್ಳಲಿದೆ.
ಹೌದು, ಮತ ಎಣಿಕೆ ಕಾರ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ದಾವಣಗೆರೆಯಿಂದ ಸಂತೇಬೆನ್ನೂರು, ಚನ್ನಗಿರಿಗೆ ಹೋಗುವ ವಾಹನ ಸವಾರರು ಶಿರಮಗೊಂಡನಹಳ್ಳಿ, ಹದಡಿ ಮೂಲಕ ಚನ್ನಗಿರಿ ಕಡೆಗೆ ಹೋಗಬೇಕಿದೆ.
ಚನ್ನಗಿರಿ ಕಡೆಯಿಂದ ಸಂತೇಬೆನ್ನೂರು ಮಾರ್ಗವಾಗಿ ದಾವಣಗೆರೆ ಕಡೆಗೆ ಬರುವವರು ಕುರ್ಕಿಯ ಹತ್ತಿರ ಎಡ ತಿರುವು ತೆಗೆದುಕೊಂಡು ಹದಡಿಯಿಂದ ದಾವಣಗೆರೆ ಕಡೆಗೆ ಬರುವುದು ಹಾಗೂ ಚಿತ್ರದುರ್ಗ ಕಡೆಗೆ ಹೋಗುವವರು ಕುರ್ಕಿಯ ಹತ್ತಿರ ಬಲ ತಿರುವು ತೆಗೆದುಕೊಂಡು ಆನಗೋಡು ಮುಖಾಂತರ ಚಿತ್ರದುರ್ಗ, ಬೆಂಗಳೂರು ಕಡೆಗೆ ಹೋಗಬೇಕಿದೆ.
ಚುನಾವಣಾ ಏಜೆಂಟರುಗಳು ಹಾಗೂ ಮತ ಕೇಂದ್ರದಲ್ಲಿ ಬರುವವರು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಮೊಬೈಲ್‌ಗಳನ್ನು ತರುವಂತಿಲ್ಲ. ಈ ಉಪಕರಣಗಳನ್ನು ಎಣಿಕಾ ಕೇಂದ್ರದಲ್ಲಿ ಸಂಪೂರ್ವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
