ದೇಶಾದ್ಯಂತ ರೈತ ಜಾಗೃತಿ ಯಾತ್ರೆ , 50000 ಹಳ್ಳಿಗಳ ರೈತರಲ್ಲಿ ಜಾಗೃತಿ
ದೆಹಲಿ: ದೇಶಾದ್ಯಂತ ರೈತ ಜಾಗೃತಿ ಯಾತ್ರೆ ಮೂಲಕ 50000 ಹಳ್ಳಿಗಳ ರೈತರ ಜಾಗೃತಿ ಮೂಡಿಸಲು ಸಂಯುಕ್ತ ಕಿಸಾನ್ ಮೋರ್ಚ ತೀರ್ಮಾನಿಸಿದೆ. ರಾಜಕೀಯೆತರ ಸಂಘಟನೆಯಾಗಿರುವ ಈ ಮೋರ್ಚಾ ನೇತೃತ್ವದಲ್ಲಿ ರಾಷ್ಟ್ರೀಯ ರೈತ ಮುಖಂಡರು ಬುಧವಾರ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.
ದೇಶದ 18ಕ್ಕೂ ಹೆಚ್ಚು ರಾಜ್ಯಗಳಿಂದ ಆಗಮಿಸಿದ ರೈತ ಮುಖಂಡರುಗಳು ಸುದೀರ್ಘವಾಗಿ ಚರ್ಚಿಸಿ ನಿರ್ಧಾರ ಕೈಗೊಂಡಿದ್ದಾರೆ. ರಾಜಸ್ಥಾನದ ಹನುಮಾನ್ನಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಪಂಜಾಬ್ನ ಜಗಜಿತ್ ಸಿಂಗ್ ಧಲೈವಾಲ್, ಮಧ್ಯಪ್ರದೇಶದ ಶಿವಕುಮಾರ್ ಕಕ್ಕಜಿ, ಕರ್ನಾಟಕದ ಕುರುಬೂರು ಶಾಂತಕುಮಾರ್, ಕೇರಳದ ಕೆ ವಿ ಬಿಜ್ಜು, ಹರಿಯಾಣದ ಆಬಿಮನ್ಯುಕೂಹರ್ ತಮಿಳುನಾಡಿನ ಎ ಎಸ್ ಬಾಬು, ಹರಿಯಾಣದ ಆತ್ಮರಾಂ, ಮಧ್ಯಪ್ರದೇಶ್ ರಾಹುಲ್, ಮಹಾರಾಷ್ಟ್ರದ ಶಂಕರ್ ದಾರಿಕರ್, ಪರಶುರಾಮ್, ರಾಜಸ್ಥಾನ, ಉತ್ತರ ಪ್ರದೇಶ್ ಸಹಿತ ರೈತ ನಾಯಕರೇಕರು ಭಾಗವಹಿಸಿದರು.
ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿ ನಿರ್ಲಕ್ಷೆ ಮಾಡಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಲಾಯಿತು ಎಂದು ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿದಿದ್ದಾರೆ.
ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕುರುಬೂರು ಶಾಂತಕುಮಾರ್, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಶಾಸನ ಜಾರಿ ಮಾಡಬೇಕು ಡಾ. ಸ್ವಾಮಿನಾಥನ್ ವರದಿಯಂತೆ ಬೆಲೆ ನಿಗದಿಯಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು ಎಂದು ತಿಳಿಸಿದರು.
ಪ್ರಮುಖ ತೀರ್ಮಾನ ಹಾಗೂ ಸರ್ಕಾರದ ಮುಂದಿಟ್ಟ ಬೇಡಿಕೆಗಳ ಹೈಲೈಟ್ಸ್:
- ದೇಶದ ರೈತರ ಎಲ್ಲಾ ಕೃಷಿ ಸಾಲ ಮನ್ನ ಮಾಡಿ ಋಣ ಮುಕ್ತಿಗೂಳಿಸಬೇಕು.
- ವಿದ್ಯುತ್ ಖಾಸಗಿಕರಣ ಬಿಲ್ ವಾಪಸ್ ಪಡೆಯಬೇಕು
- ಕಬ್ಬಿನ ಎಫ್ ಆರ್ ಪಿ ಕನಿಷ್ಟ ದರ ಸಕ್ಕರೆ ಇಳುವರಿ5ಕ್ಕೆ ಇಳಿಸಬೇಕು ದರ ಟನ್ಗೆ 3500 ರೂಗೆ ಏರಿಕೆ ಮಾಡಬೇಕು.
- ದೇಶಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆಗೆ ತಡೆಯಾಗಬೇಕು.
- ಪ್ರಧಾನಿ ಫಸಲ್ ಭೀಮಾ ಯೋಜನೆ ತಿದ್ದುಪಡಿ ಮಾಡಬೇಕು.
- ದೇಶದ ಕೃಷಿ ಕ್ಷೇತ್ರದ ಮೇಲೆ ಅಪಾರ ಕೆಟ್ಟ ಪರಿಣಾಮ ಬೀರುತ್ತಿರುವ, ವಿಶ್ವ ವ್ಯಾಪಾರ ಒಪ್ಪಂದದಿಂದ ಕೇಂದ್ರ ಸರ್ಕಾರ ಹೊರಗೆ ಬರಬೇಕು.