ಆ.27 ರಂದು ತಾಲ್ಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿರೋಧಕ ಲಸಿಕಾಕರಣ

IMG-20210826-WA0015

ದಾವಣಗೆರೆ: ತಾಲ್ಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆ. 27 ರಂದು ಲಸಿಕಾ ಮೇಳ ಆಯೋಜಿಸಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ 01 ನೇ ಅಥವಾ 02ನೇ ಡೋಸ್ ಲಸಿಕೆ ತಪ್ಪದೆ ಪಡೆಯುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮನವಿ ಮಾಡಿದ್ದಾರೆ.

ಇದುವರೆಗೂ ಒಂದೂ ಡೋಸ್ ಲಸಿಕೆ ಪಡೆಯದ ಅಥವಾ 01ನೇ ಡೋಸ್ ಪಡೆದು, 2ನೇ ಡೋಸ್ ಪಡೆಯದೇ ಇರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಕೂಡಲೇ ಸಮೀಪದ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಲಸಿಕೆ ಪಡೆಯಬೇಕು, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1 ರಿಂದ 10 ನೇ ತರಗತಿ, ಪ.ಪೂ. ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಲಸಿಕೆ ಪಡೆಯಬೇಕು.

18 ವರ್ಷ ಮೇಲ್ಪಟ್ಟ 1ನೇ ಡೋಸ್ ಹಾಗೂ 2ನೇ ಡೋಸ್ ಲಸಿಕೆ ಪಡೆಯುವವರಿಗೆ ಆ. 27 ರಂದು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ ನೀಡಲಾಗುವುದು.

ತಾಲ್ಲೂಕಿನಲ್ಲಿ ಆಲೂರು, ಆಲೂರಹಟ್ಟಿ, ಆನಗೋಡು, ಅಣಜಿ, ಅರಸಾಪುರ, ಬಾಡಾ, ದೊಡ್ಡಬಾತಿ, ಹದಡಿ, ಹೆಬ್ಬಾಳು, ಹೆಮ್ಮನಬೇತೂರು, ಹೊನ್ನೂರು, ಹೂವಿನಮಡು, ಹುಚ್ಚವ್ವನಹಳ್ಳಿ, ಐಗೂರು, ಕಕ್ಕರಗೊಳ್ಳ, ಕಂದಗಲ್ಲು, ಕೊಡಗನೂರು, ಲೋಕಿಕೆರೆ, ಮಳಲ್ಕೆರೆ, ಮಾಯಕೊಂಡ, ಮಲಕುಂದ, ನರ‍್ಲಿಗೆ, ಆರ್‌ಜಿ. ಹಳ್ಳಿ, ಶ್ಯಾಗಲೆ, ತೋಳಹುಣಸೆ ಗ್ರಾಮಗಳಲ್ಲಿನ ಆರೋಗ್ಯ ಸಂಸ್ಥೆಗಳಿಗೆ ಒಟ್ಟಾರೆ 4300 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ.

ದಾವಣಗೆರೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಆಜಾದ್‌ನಗರ, ಬಾಷಾನಗರ, ಭಾರತ್ ಕಾಲೋನಿ, ದೊಡ್ಡಪೇಟೆ, ಸೇಂಟ್‌ಫಾಲ್ಸ್ ಶಾಲೆ ಬಳಿಯ ನಗರ ಆರೋಗ್ಯ ಕೇಂದ್ರ, ರಾಮನಗರ, ಹೆಚ್‌ಕೆಆರ್ ನಗರ, ಎಸ್‌ಎಂಕೆ ನಗರ ಹಾಗೂ ನಿಟ್ಟುವಳ್ಳಿ ನಗರ ಆರೋಗ್ಯ ಕೇಂದ್ರ, ರೋಟರಿ ಕ್ಲಬ್‌ಗೆ ಒಟ್ಟಾರೆ 6700 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿಗೆ ಕೋವ್ಯಾಕ್ಸಿನ್ 300 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!