ಕೊವಿಡ್ ಲಸಿಕಾಕರಣ ; ಶೇ. 100ರ ಗುರಿ ತಲುಪಲೇಬೇಕು – ರಾಕೇಶ್ ಸಿಂಗ್

IMG-20211026-WA0070

ತುಮಕೂರು : ಕೋವಿಡ್ ಲಸಿಕಾಕರಣವನ್ನು ಶೇ. 100ರಷ್ಟು ಸಂಪೂರ್ಣಗೊಲಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು.

ಈ ಮಹತ್ವದ ಸಭೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಸರಾಸರಿಗಿಂತ ಕಡಿಮೆ ಪ್ರಗತಿ ಹೊಂದಿರುವ ತಾಲ್ಲೂಕುಗಳು ಮತ್ತು ಹೋಬಳಿಗಳನ್ನು ಗುರುತಿಸಿ ತ್ವರಿತವಾಗಿ ಲಸಿಕಾಕರಣದ ಗುರಿ ಸಾಧಿಸುವಂತೆ ರಾಕೇಶ್ ಸಿಂಗ್ ಸೂಚಿಸಿದರು.

ಈ ಮಹತ್ವದ ಸಭೆಯಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಜಿ.ಪಂ ಸಿಇಒ ಶ್ರೀಮತಿ ವಿದ್ಯಾ, ಎಡಿಸಿ ಚನ್ನಬಸಪ್ಪ, ಜಿಲ್ಲಾ ವೈದ್ಯಾಧಿಕಾರಿ ಡಾ. ವೀರಭದ್ರಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!