ಆಗಸ್ಟ್ 13 ರಂದು ಕೋವಿಶೀಲ್ಡ್ ನ ಒಟ್ಟು 1,100 ಡೋಸ್ ಲಸಿಕೆ ಲಭ್ಯ

IMG-20210812-WA0014

 

ದಾವಣಗೆರೆ: ದಾವಣಗೆರೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಆ.13 ರಂದು ಕೋವಿಶೀಲ್ಡ್ ನ ಒಟ್ಟು 1,100 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದ್ದು, ಗರ್ಭಿಣಿಯರು, ಬಾಣಂತಿಯರು, ಅಪೌಷ್ಠಿಕ ಮಕ್ಕಳ ಪೋಷಕರಿಗೆ ಹಾಗೂ 2ನೇ ಡೋಸ್ ನವರಿಗೆ ಆದ್ಯತೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.

ಹಂಚಿಕೆ ಮಾಡಲಾಗಿರುವ ಲಸಿಕೆ ಡೋಸ್‌ಗಳ ವಿವರ ಇಂತಿದೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ-200 ಡೋಸ್, ಆಜಾದ್‌ನಗರ, ಬಾಷಾನಗರ, ಭಾರತ್ ಕಾಲೋನಿ, ದೊಡ್ಡಪೇಟೆ, ಸೇಟ್‌ಫಾಲ್ಸ್ ಶಾಲೆ ಹತ್ತಿರದ ಆರೋಗ್ಯ ಕೇಂದ್ರ, ರಾಮನಗರ, ಹೆಚ್‌ಕೆಆರ್ ನಗರ, ಎಸ್‌ಎಂಕೆ ನಗರ, ನಿಟ್ಟುವಳ್ಳಿ ನಗರ ಆರೋಗ್ಯ ಕೇಂದ್ರಗಗಳಿಗೆ ತಲಾ 100 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!