Cow’s Rescued: ಎರಡು ಕಂಟೈನರ್ ನಲ್ಲಿ 24 ಗೋವುಗಳು.! ಭಾರಿ ಸಾಹಸ ಪಟ್ಟ ಗೋ ರಕ್ಷಕರು.!

Exclusive report:
ದಾವಣಗೆರೆ: ಅಕ್ರಮವಾಗಿ ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರು ಕಡೆ ಗೋವುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಒಂದು ಕಂಟೇನರ್ ಹಿಂದೂ ಜಾಗರಣೆ ವೇದಿಕೆಯ ಕಾರ್ಯಕರ್ತರು ಸುಮಾರು 28 ಹಸುಗಳನ್ನು ರಕ್ಷಿಸಿದ್ದಾರೆ.
ಸರ್ಕಾರ ಅಕ್ರಮವಾಗಿ ಹಿಂಸಾತ್ಮಕವಾಗಿ ಗೋ ಸಾಗಾಟ ನಿಷೇಧಿಸಲಾಗಿದೆ. ಗೋ ರಕ್ಷಣೆ ಸಲುವಾಗಿ ಬಿಗಿಯಾದ ಕಾನೂನನ್ನು ಜಾರಿಗೆ ತಂದಿದ್ದರು ಅದು ಕೇವಲ ಪೇಪರ್ ದಾಖಲೆಗೆ ಸೀಮಿತವಾಗಿದೆ ಎನ್ನಲಾಗುತ್ತಿದೆ.
ಅಕ್ರಮವಾಗಿ ಯಾವುದೇ ಸೂಕ್ತ ದಾಖಲೆಗಳು ಹಾಗೂ ಸಂಬಂಧಿಸಿದ ಇಲಾಖೆಯ ಪರವಾನಿಗೆ ಪಡೆಯದೇ ಒಟ್ಟು 24 ಹಸುಗಳನ್ನು ಹಿಂಸಾತ್ಮಕ ರೂಪದಲ್ಲಿ ಕಸಾಯಿಖಾನೆಗೆ ಹಸುಗಳನ್ನು ಸಾಗಣೆ ಮಾಡಲಾಗುತ್ತಿದ್ದರು ಎನ್ನಲಾಗಿದೆ. ಹಸುಗಳನ್ನು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ವಿದ್ಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಮಾಡಿದ್ದಾರೆ.
ಹಸುಗಳನ್ನು ಕಂಟೈನರ್ನಲ್ಲಿ ತುಂಬಿ, ಅಕ್ರಮವಾಗಿ ಬೆಂಗಳೂರಿನ ಕಡೆಗೆ ಸಾಗಿಸಲಾಗುತ್ತಿತ್ತು. ಒಂದು ಕಂಟೈನರ್ ನಲ್ಲಿದ್ದ 18 ಗೋವುಗಳನ್ನು ರಾತ್ರಿ 10 ಗಂಟೆಯಲ್ಲಿ ಹಾಗೂ ಇನ್ನೊಂದು ಲಾರಿಯಲ್ಲಿ 6 ಗೋವುಗಳನ್ನು ಮಧ್ಯ ರಾತ್ರಿ 3 – 30 ರ ವೇಳೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಸುಗಳನ್ನು ರಕ್ಷಿಸಿದ್ದಾರೆ. ಹಸು ಸಾಗಣೆ ಮಾಡುತ್ತಿದ್ದವರು ಯಾರು,ಎಲ್ಲಿಂದ,ಎಲ್ಲಿಗೆ ಸಾಗಾಟ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ದಾವಣಗೆರೆ ವಿಧ್ಯಾನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮಾಡುತ್ತಿದ್ದಾರೆ.