ಡಿ. 30 ರಿಂದ ನಗರದಲ್ಲಿ ದಿ. ಪಿ.ಬಿ. ಧುತ್ತರಗಿ ವಿರಚಿತ ‘ಮುದುಕನ ಮದುವೆ ಹಾಸ್ಯಭರಿತ ನಾಟಕ’ ಪ್ರಾರಂಭ
ದಾವಣಗೆರೆ: ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟಕ ಸಂಘದಿಂದ ದಿ. ಪಿ.ಬಿ. ಧುತ್ತರಗಿ ವಿರಚಿತ ‘ಮುದುಕನ ಮದುವೆ ಹಾಸ್ಯಭರಿತ ನಾಟಕ’ದ ಉದ್ಘಾಟನಾ ಸಮಾರಂಭವು ಡಿ.೩೦ರ ಇಂದು ಸಂಜೆ ೫:೩೦ ಕ್ಕೆ ಪಿಬಿ ರಸ್ತೆಯಲ್ಲಿರುವ ಟಿ.ಎಂ.ಪಿ.ಎನ್ ಕಾಂಪೌಂಡ್‌ನಲ್ಲಿ ಜರುಗಲಿದೆ ಎಂದು ಸಂಘದ ಸಂಚಾಲಕ ಜಾಲ್ಯಾಳ ಮಂಜುನಾಥ್ ಹೇಳಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ಅಧ್ಯಕ್ಷ ಎ.ಭದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕೈಗಾರಿಕೋದ್ಯಮಿಗಳಾದ ಎ.ಎಸ್. ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಚಂದ್ರ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮುದುಕನ ಮದುವೆ ಹಾಸ್ಯಭರಿತ ನಾಟಕ’ವು ಡಿ.೩೦ ರ ಇಂದಿನಿಂದ ನಾಲ್ಕು ದಿನಗಳ ಕಾಲ ಮಧ್ಯಾಹ್ನ ಮತ್ತು ಸಂಜೆ ಎರಡು ಪ್ರದರ್ಶನವನ್ನು ಕಾಣಲಿದ್ದು, ಜೀ ಕನ್ನಡದ ಕಲಾವಿದೆ ಮಂಥನ ನಾಟಕದಲ್ಲಿ ಅಭಿನಯಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾದೇವಪ್ಪ ಜಾಲ್ಯಾಳ, ಕುಮಾರ್ ಶಿಗ್ಗಾಂವ್, ಸಿದ್ದಣ್ಣ ಕಮತ್ತಿಗೆ, ಚನ್ನಬಸವ ಕೂಡ್ಲಂಗಿ ಇದ್ದರು.