ಪಾಲಿಕೆ ಡಬ್ಬಾ ಬಜೆಟ್
ದಾವಣಗೆರೆ: 2024-25ನೇ ವರ್ಷದ ಮಹಾನಗರ ಪಾಲಿಕೆಯದ್ದು ಖಾಲಿ ಡಬ್ಬಾ ಬಜೆಟ್ ಎಂದು ವಿರೋಧ ಪಕ್ಷ ಟೀಕಿಸಿದೆ.
ಮಂಗಳವಾರ ಮೇಯರ್ ವಿನಾಯಕ ಬಿ.ಹೆಚ್. ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆಯಾದ ನಂತರ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ನೇತೃತ್ವದಲ್ಲಿ ಖಾಲಿ ಡಬ್ಬಿಗಳನ್ನು ಪ್ರದರ್ಶಿಸುವ ಮೂಲಕ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.
ಕಳೆದ ಬಜೆಟ್‌ಗೆ ಹೋಲಿಸಿದರೆ, ಈ ಬಜೆಟ್‌ನಲ್ಲಿ ಆರಂಭಿಕ ಶಿಲ್ಕನ್ನೇ ಕಡಿಮೆ ಮಾಡಲಾಗಿದೆ. ಅಲ್ಲದೆ ಆದಾಯ ಸಂಗ್ರಹಣೆ ಗುರಿಯೂ ಕಡಿಮೆ ಇದೆ. ಹೀಗಿದ್ದಾಗ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆದಾಯ ಸಂಗ್ರಹಣೆಗೆ ಒತ್ತು ಕೊಡದ ಗಾರಣ ಇದು ದೂರದೃಷ್ಟಿಯ ಕೊರತೆಯ ಬಜೆಟ್ ಆಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸದಸ್ಯರಾದ ಎ.ನಾಗರಾಜ್, ಅಬ್ದುಲ್ ಲತೀಫ್, ಚಮನ್ ಸಾಬ್ ಬಜೆಟ್ ಸಮರ್ಥಿಸಿಕೊಂಡರೆ, ಬಿಜೆಪಿ ಸದಸ್ಯರಾದ ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್, ಶಿವಾನಂದ ಬಜೆಟ್ ಬಗ್ಗೆ ಆಕ್ಷೇಪಿಸಿದರು.