ಕತ್ತಲಗೆರೆ : ಬ್ಯಾಂಕ್ ಆಫ್ ಬರೋಡಾದಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ : ಇಂದು ಕತ್ತಲಗೆರೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಕಾರಿಗನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ನೂರ್ ಫಾತಿಮಾ ಮಾತನಾಡಿ ಮಹಿಳೆಯರ ಸಬಲೀಕರಣಕ್ಕಾಗಿ ಬ್ಯಾಂಕ್ ಆಫ್ ಬರೋಡಾ ಶ್ರಮಿಸುತ್ತಿದೆ ಎಂದರು. ಇಂಡಿಯಾ ಫಸ್ಟ್ ಲೈಫ್ ಇನ್ಶುರೆನ್ಸ್ ನ ಸರೀನ್ ಬಾನು ಜೀವ ವಿಮೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಸ್ಟಾರ್ ಹೆಲ್ತ್ ನ ವ್ಯವಸ್ಥಾಪಕರಾದ ಪುಷ್ಪ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಅದನ್ನು ನಿಭಾಯಿಸುವ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪಾತ್ರದ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ವ್ಯವಸ್ಥಾಪಕ ವಂಶಿಕೃಷ್ಣ ವಹಿಸಿದ್ದರು. ಈ ವೇಳೆ ಶಾಖೆಯ ಕೃಷಿ ಅಧಿಕಾರಿ ಕುಮಾರಿ ಪವಿತ್ರ, ಸಿಬ್ಬಂದಿ ರವಿಕುಮಾರ್ ಇದ್ದರು. ಈ ಸಂಧರ್ಭದಲ್ಲಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.