ಮಹಾನಗರ ಪಾಲಿಕೆಯಲ್ಲಿ ನಿರುಪಯುಕ್ತ ಶೌಚಾಲಯ ಸಾರ್ವಜನಿಕರ ಪದರಾಟ: ಸ್ಮಾರ್ಟ್ ನಗರಕ್ಕೆ ಕಪ್ಪುಚುಕ್ಕೆ

ದಾವಣಗೆರೆ: ಸಾವಿರಾರು ಕೋಟಿ ರೂ. ಖರ್ಚು ಮಾಡಿ ದಾವಣಗೆರೆಯನ್ನು ಸ್ಮಾರ್ಟ್ ಮಾಡಲು ಹೊರಟ ಮಹಾನಗರ ಪಾಲಿಕೆಯೇ ಸ್ಮಾರ್ಚ್ ಆಗುತ್ತಿಲ್ಲ.
ಮಹಾನಗರ ಪಾಲಿಕೆಯ ಹೊರ ಭಾಗದಲ್ಲಿರುವ ಶೌಚಾಲಯಗಳಿಗೆ ಬೀಗ ಜಡಿದಿದ್ದು. ಸಾರ್ವಜನಿಕರು ಶೌಚಾಲಯಕ್ಕೆ ಹೋಗಬೇಕಾದರೆ ಸಂದಿ, ಮೂಲಿ ಹುಡುಕುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಶೌಚಾಲಯಕ್ಕೆ ಬೀಗ ಜಡಿದಿರುವುದಕ್ಕೆ ಕಾರಣ ತಿಳಿದಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಶೌಚಾಲಯಗಳು ಬೀಗ ಮುಚ್ಚಿವೆ. ಅಧಿಕಾರಿಗಳು, ಸಿಬ್ಬಂದಿಗಳಿಗೆ ಪಾಲಿಕೆ ಕಚೇರಿಯಲ್ಲಿ ವ್ಯವಸ್ಥೆ ಇದೆ. ಆದರೆ ಸಾರ್ವಜನಿಕರ ಪಾಡೇನು ಎಂಬುದು ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ.
ಇದೀ ಕಂದಾಯ ಕಟ್ಟಲೆಂದೇ ದಿನ ಪೂರ್ತಿ ಕೆಲಸ ಬಿಟ್ಟು ಮಹಾನಗರ ಪಾಲಿಕೆ ಮುಂಭಾಗ ಜನರು ಸರದಿ ಸಾಲಿನಲ್ಲಿ ನಿಲ್ಲಲಾರಂಭಿಸಿದ್ದಾರೆ. ವಿವಿಧ ಕೆಲಸಗಳಿಗಾಗಿ ಮಹಾನಗರ ಪಾಲಿಕೆಗೆ ಬರುತ್ತಿದ್ದಾರೆ. ಕೊಟ್ಯಾಂತರ ಆದಾಯವನ್ನು ಸಾರ್ವಜನಿಕರಿಂದಲೇ ಸಂಗ್ರಹಿಸುವ ಮಹಾನಗರ ಪಾಲಿಕೆ, ಜನರಿಗಾಗಿ ಶೌಚಾಲಯ ವ್ಯವಸ್ಥೆ ಮಾಡದಿರುವುದು ಮಾತ್ರ ಶೋಚನೀಯ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸುವರಾ ಕಾದು ನೋಡಬೇಕಿದೆ.