ದಾವಣಗೆರೆ ಹೈಟೆಕ್ ರೈಲ್ವೆ ನಿಲ್ದಾಣದ ಮಾದರಿ ವಿಘ್ನೇಶ್ವರ ಪ್ರತಿಷ್ಠಾಪಿಸಿದ ಛಾಯಾಗ್ರಾಹಕ
ದಾವಣಗೆರೆ: ಗಣಪತಿಯನ್ನು ಪ್ರತಿಷ್ಠಾಪಿಸಲೆಂದೆ ತರಹೇವಾರಿ ವೇದಿಕೆಗಳನ್ನು ಜನರು ಅಣಿಗೊಳಿಸುತ್ತಾರೆ. ನೋಡುಗರನ್ನು ಆಕರ್ಷಿಸುವಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂಬುದೆ ಅದರ ಹಿಂದಿರುವ ಉದ್ದೇಶವಾಗಿತ್ತದೆ. ಅದೇ ರೀತಿ ಇಲ್ಲೊಬ್ಬ ಕಲಾವಿದ ತಮ್ಮ ಮನೆಯಲ್ಲಿ ಇತ್ತೀಚಿಗೆ ತಾನೆ ಉದ್ಘಾಟನೆಗೊಂಡಿರುವ ದಾವಣಗೆರೆಯ ಹೈಟೆಕ್ ರೈಲ್ವೆ ನಿಲ್ದಾಣದ ಹೊರ ಮಾದರಿಯನ್ನು ಮಾಡಿ ವಿಘ್ನ ನಿವಾರಕನನ್ನು ಪ್ರತಿಷ್ಠಾಪಿಸಿದ್ದಾರೆ.
ದರ್ಶನ್ ಎಂಬುವವರು ಮೂಲತಃ ಕಲಾವಿದರಾಗಿದ್ದು, ನಗರದ ಬಸವರಾಜ ಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ಈ ರೀತಿ ವೈಶಿಷ್ಟ್ಯದಾಯಕವಾಗಿ ತಯಾರಿ ನಡೆಸಿ, ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು, ಇದನ್ನು ನೋಡಿ ಕಣ್ತುಂಬಿ ಕೊಳ್ಳುವುದಕ್ಕಾಗಿಯೇ ಜನರು ಬರುತ್ತಿದ್ದಾರೆ.
ಇತ್ತೀಚೆಗಷ್ಟೇ ಹೈಟೆಕ್ ಮಾದರಿಯಲ್ಲಿ ದಾವಣಗೆರೆ ರೈಲ್ವೆ ನಿಲ್ದಾಣ ರೂಪುಗೊಂಡು ಲೋಕಾರ್ಪಣೆಗೊಂಡಿದ್ದು, ಹೊರ ನೋಟವೇ ನೋಡುಗರನ್ನು ಆಕರ್ಷಿಸುವಂತೆ ಮಾಡಿದೆ. ಅದೇ ರೀತಿ ತಮ್ಮ ಕೈಚಳಕದಲ್ಲಿ ನಾಲ್ಕು ದಿನದಲ್ಲಿ ತಯಾರಿಸಿರುವ ದರ್ಶನ್ ಅವರು, ಜನರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.