ದಾವಣಗೆರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ: ಸಾಮಾಜಿಕ ಜಾಲತಾಣದಲ್ಲಿ ಯುವಕನ ಆಕ್ರೋಶ

ದಾವಣಗೆರೆ: ದಾವಣಗೆರೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕುರಿತು ಕುಟುಕಿರುವ ಯುವಕನೋರ್ವನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ದಾವಣಗೆರೆ ನಗರದಲ್ಲಿ ಹಲವಾರು ತಗ್ಗುಗುಂಡಿಗಳು, ಮಳೆ ಬಂದರೆ ಮೊಣಕಾಲುದ್ದ ನೀರು ನಿಂತು ವಾಹನಸವಾರರಿಗೆ ತೊಂದರೆಯುಂಟು ಮಾಡುವ ಅಂಡರ್ ಬ್ರಿಡ್ಜ್ ಗಳಿದ್ದರೂ ಅದನ್ನು ದುರಸ್ತಿ ಪಡಿಸುವ ಗೋಜಿಗೆ ಹೋಗದೆ ಅದರಲ್ಲಿಯೇ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ ವಿನಃ ಯಾರೂ ಧ್ವನಿಯೆತ್ತುವುದಿಲ್ಲ.
ಇನ್ನೂ ಇಲ್ಲಿನ ನಾಗರೀಕರು ಅಷ್ಟೇ ಅದೆಂತಹ ಕೊಚ್ಚೆ ಗುಂಡಿಗಳಿದ್ದು ನೀರು ನಿಂತು ಗಬ್ಬುನಾರುತ್ತಿದ್ದರೂ ಯಾರೂ ಈ ಬಗ್ಗೆ ಪ್ರಶ್ನಿಸಲ್ಲ.. ಜನಪ್ರತಿನಿಧಿಗಳು, ಪ್ರಜೆಗಳು ನಿಜಕ್ಕೂ ಗ್ರೇಟ್ ಎಂದು ವ್ಯಂಗ್ಯವಾಡಿರುವ ವೀಡಿಯೋ ಫುಲ್ ವೈರಲ್ ಆಗಿ ಪ್ರಶ್ನಿಸಿದವರಿಗೆ ಉಗಿದಂತಾಗಿದೆ.