ದಾವಣಗೆರೆ : ಚಲಿಸುತ್ತಿರುವ ರೈಲು ಹತ್ತಲು ಪ್ರಯತ್ನಿಸಿದ ಪ್ರಯಾಣಕನ ಪ್ರಾಣ ರಕ್ಷಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿ
ದಾವಣಗೆರೆ : ನಗರದ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿಗೆ ಹತ್ತಲೆತ್ನಿಸಿದ ವ್ಯಕ್ತಿಗೆ ಬಿದ್ದು, ಇನ್ನೆನ್ನು ರೈಲಿನ ಕೆಳಗೆ ಸಿಲುಕಬೇಕು ಎನ್ನುವಷ್ಟರಲ್ಲಿ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿಯ ಚಾಕಚಕ್ಯತೆಯಿಂದ ಪ್ರಯಾಣಿಕ ಬದುಕುಳಿದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇಂದು ದಾವಣಗೆರೆ ರೈಲ್ವೆ ಪೊಲೀಸರಾಗಿ ಕಾರ್ಯ ನಿರ್ವಹಿ ಸುತ್ತಿರುವ ಸಿಬ್ಬಂದಿ ನಾಗರಾಜ್ ಬಿ.ಆರ್.ಆರ್.ಪಿ.ಸಿ. 97, ಇವರು ದಾವಣಗೆರೆ ರೈಲ್ವೆ ನಿಲ್ದಾಣದ ವೇದಿಕೆ ನಂಬರ್ 02ರಲ್ಲಿ ವೇದಿಕೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ 12726 ಸಂಖ್ಯೆಯ ಎಕ್ಸ್ಪ್ರೆಸ್ ರೈಲುಗಾಡಿಯು ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ದಾವಣಗೆರೆ ನಿಲ್ದಾಣದಲ್ಲಿ ನಿಲ್ಲಿಸಿ ಮತ್ತೆ ಮುಂದಿನ ಪ್ರಯಾಣ ಪ್ರಾರಂಭಿಸಿರುವ ಹೋತ್ತಿಗೆ ಪ್ರಯಾಣಿಕರೊಬ್ಬರು ಓಡಿ ಬಂದು ಹತ್ತಲು ಪ್ರಯತ್ನಿಸಿ ಕಾಲುಜಾರಿ ಕೆಳಗೆ ಬಿದ್ದರು. ಬೀಳುತ್ತಿರುವ ಪ್ರಯಾಣಿಕನನ್ನು ಗಮನಿಸಿದ ಸಿಬ್ಬಂದಿ ಓಡಿಬಂದು ಪ್ರಯಾಣಿಕರ ಪ್ರಾಣ ರಕ್ಷಣೆ ಮಾಡಿದ್ದಾರೆ.