ದಾವಣಗೆರೆ: ಒಂದೆಡೆ ಚುನಾವಣಾ ಕಾವು ಏರ ತೊಡಗಿದೆ. ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿದ್ದಾರೆ. ಕೆಲವರು ನಾಮಪತ್ರ ಸಲ್ಲಿಸುವ ಧಾವಂತದಲ್ಲಿದ್ದಾರೆ.
ಈ ಮದ್ಯೆ ಅಭಿಮಾನಿಗಳು ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವುಗಾಗಿ ಪೂಜೆ, ಪುನಸ್ಕರಾ, ಹರಕೆ ತೀರಿಸುವ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಹೌದು, ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಅಭಿಮಾನಿಯೊಬ್ಬ ವಿಶೇಷ ಹರಕೆ ತಿರಿಸಿದ್ದಾರೆ.
ಶಿವಗಂಗಾ ಬಸವರಾಜ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವರ ಅಭಿಮಾನಿ ಅವಿನಾಶ್ (ಅಭಿ) ಅವರು ದಾವಣಗೆರೆ ದುರ್ಗಾಂಬಿಕಾ ದೇವಿಗೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ.
ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಿಶಾಸುರ ಮರ್ದಿನಿ ಅವತಾರದಲ್ಲಿ ಪೂಜೆ ಮಾಡಿಸಿದ ಅಭಿಮಾನಿ, ನಂತರ ದಿಡ್ ನಮಸ್ಕಾರ ಹಾಕಿದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಭಾರಿ ಬಹುಮತದಿಂದ ಜಯಶಾಲಿಯಾಗಲಿ. ಅವರ ಮೇಲೆ ಚುನಾವಣೆಯಲ್ಲಿ ಯಾವುದೇ ಕೆಟ್ಟ ಕಣ್ಣು ಬೀಳದಿರುವ ಹಾಗೆ ಕಾಪಾಡುವಂತೆ ಅವರು ದೇವತೆಯಲ್ಲಿ ಮನವಿ ಮಾಡಿದ್ದಾರೆ.
ಶಿವಗಂಗಾ ಬಸವರಾಜ್ ಸಹೋದರ ಶಿವಗಂಗಾ ಶ್ರೀನಿವಾಸ್ ಕೂಡ ಈ ಪೂಜೆಯಲ್ಲಿ ಭಾಗಿಯಾಗಿದ್ದರು.
