davanagere; ವಲಯ ಕಛೇರಿ ಸ್ಥಳಾಂತರ

ದಾವಣಗೆರೆ, ಆ. 18: ದಾವಣಗೆರೆ (davanagere) ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿ-2 ಗೆ ಹೊಸ ಕಟ್ಟಡ ನಿರ್ಮಾಣವಾದ್ದರಿಂದ ಹದಡಿ ರಸ್ತೆ, ಟಿ.ವಿ ಸ್ಟೇಷನ್ ಮುಂಭಾಗದಲ್ಲಿರುವ ವಲಯ ಕಛೇರಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ವಲಯ ಕಚೇರಿ-2 ರ ವಾರ್ಡ್ ನಂ. 18, 19, 20, 21, 25, 26, 27, 28, 29, 30, 32, 332, 34, 35, 36 ಮತ್ತು 37 ರ ಆಸ್ತಿ ಮಾಲೀಕರು ಆಸ್ತಿ ಕಂದಾಯ, ನೀರಿನ ದರ, ಯು.ಜಿ.ಡಿ ಶುಲ್ಕ, ಖಾತೆ ನಕಲು, ಇ ಆಸ್ತಿ, ಆಸ್ತಿಗಳ ಹಕ್ಕು ವರ್ಗಾವಣೆ, ಹಾಗೂ ಆಸ್ತಿಗಳಿಗೆ ಸಂಬಂಧಿಸಿದ ಕೆಲಸಗಳಿಗೆ ವಲಯ ಕಛೇರಿ ನೂತನ ಕಟ್ಟಡಕ್ಕೆ ಭೇಟಿ ನೀಡಬಹುದೆಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

Outsource employee; ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಪ್ರಸ್ತಾವನೆಗೆ ಸಚಿವರ ಸೂಚನೆ

Leave a Reply

Your email address will not be published. Required fields are marked *

error: Content is protected !!