ದಾವಣಗೆರೆ : ಮಾಯಕೊಂಡದ ಕಾರಿಗನೂರು ಗ್ರಾಮದ ರೈತ ಆತ್ಮಹತ್ಯೆ

Davangere: A farmer of Kariganur village of Mayakonda committed suicide

ದಾವಣಗೆರೆ :ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಕಾರಿಗನೂರು ಗ್ರಾಮದ ರೈತ ರಾಜಪ್ಪ(49)ಸಾಲದ ಬಾಧೆ ತಾಳಲಾರದೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಲಿಸದೆ ಶುಕ್ರವಾರ ನಿಧನರಾಗಿದ್ದಾರೆ. ಮೃತ ರೈತ ರಾಜಪ್ಪ 1 ಎಕರೆ ಜಮೀನು ಹೊಂದಿದ್ದರು, ಇದರ ಜತೆ 2 ಎಕರೆ ಜಮೀನನ್ನು ಗುತ್ತಿಗೆ ಹಾಕಿಸಿಕೊಂಡು ಕೃಷಿ ಮಾಡುತ್ತಿದ್ದರು. ಗ್ರಾಮದಲ್ಲಿ ಕೈ ಸಾಲವಾಗಿ 4 ಲಕ್ಷ, ಬ್ಯಾಂಕ್‌ನಲ್ಲಿ 35 ಸಾವಿರ, ಶ್ರೀಧರ್ಮಸ್ಥಳ ಸಂಘದಿಂದ 36 ಸಾವಿರ ಒಟ್ಟು ಸೇರಿ 4 ಲಕ್ಷದ 71 ಸಾವಿರ ಸಾಲ ಮಾಡಿದ್ದರು. ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ಸಾಲ ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ಜ್ಯೋತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!