ಲೋಕಲ್ ಸುದ್ದಿ

ದಾವಣಗೆರೆ ವಿಧಾನಸಭಾ ಚುನಾವಣೆ; ಏ.19 ರ ವರೆಗೆ 7 ಕ್ಷೇತ್ರಗಳಿಂದ 95 ನಾಮಪತ್ರ ಸಲ್ಲಿಕೆ

ದಾವಣಗೆರೆ ವಿಧಾನಸಭಾ ಚುನಾವಣೆ; ಏ.19 ರ ವರೆಗೆ 7 ಕ್ಷೇತ್ರಗಳಿಂದ 95 ನಾಮಪತ್ರ ಸಲ್ಲಿಕೆ

ದಾವಣಗೆರೆ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 19 ರ ವರೆಗೆ ಜಿಲ್ಲೆಯ 7 ಕ್ಷೇತ್ರಗಳಿಂದ ಪರುಷ 77 ಹಾಗೂ 7 ಮಹಿಳೆಯರು ಸೇರಿ 84 ಅಭ್ಯರ್ಥಿಗಳಿಂದ 95 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಒಟ್ಟು ಸಲ್ಲಿಕೆಯಾದ ನಾಮಪತ್ರಗಳಲ್ಲಿ 87 ಪುರುಷ, 8 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷವಾರು ವಿವರದನ್ವಯ ಬಿಜೆಪಿ 18, ಕಾಂಗ್ರೆಸ್ 13, ಆಮ್ ಆದ್ಮಿ 2, ಬಿಎಸ್‍ಪಿ 2, ಜೆಡಿಎಸ್ 7, ನೊಂದಾಯಿತ, ನೊಂದಾಯಿತವಲ್ಲದ ಪಕ್ಷಗಳಿಂದ 22, ಪಕ್ಷೇತರ 31 ನಾಮಪತ್ರಗಳು ಸಲ್ಲಿಕೆಯಾಗಿವೆ.

ಏ.19 ರಂದು ನಾಮಪತ್ರ ಸಲ್ಲಿಸಿದವರ ವಿವರ:

103.ಜಗಳೂರು ಪ.ಪಂ.ಮೀಸಲು ಕ್ಷೇತ್ರ ಪಿ.ಅಜ್ಜಯ್ಯ ಲೋಕಶಕ್ತಿ ಪಕ್ಷ, ಹೆಚ್.ಪಿ.ರಾಜೇಶ್ ಸೇರಿ ಇದುವರೆಗೆ 7, 105.ಹರಿಹರ ಕ್ಷೇತ್ರ; ಬಿ.ಪಿ.ಹರೀಶ್ ಬಿಜೆಪಿ, ಸಂಕೇತ್ ಎಸ್. ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ, ಹೆಚ್.ಎಸ್.ಶಿವಶಂಕರ್ ಜೆಡಿಎಸ್‍ನಿಂದ 2 ನಾಮಪತ್ರ, ಗಣೇಶಪ್ಪ ದುರ್ಗದ ಆಮ್ ಆದ್ಮಿ ಪಾರ್ಟಿ, ಪರಶುರಾಮ ಎಂ. ಪಕ್ಷೇತರ ಸೇರಿ ಇದುವರೆಗೆ 11,

106.ದಾವಣಗೆರೆ ಉತ್ತರ ಕ್ಷೇತ್ರ: ಕೆ.ಹೆಚ್.ನಗರಾಜ ಬಿಜೆಪಿ, ರುದ್ರೇಶ ಕೆ.ಹೆಚ್., ಕೀರ್ತಿಕುಮಾರ್ ಕೆ.ಎಸ್., ಶ್ರೀಕಾಂತ ಎಂ. ಪಕ್ಷೇತರ ಸೇರಿ ಇದುವರೆಗೆ 17 ನಾಮಪತ್ರಗಳು ಸಲ್ಲಿಕೆಯಾಗಿವೆ.

107.ದಾವಣಗೆರೆ ದಕ್ಷಿಣ ಕ್ಷೇತ್ರ: ಅಜಯ್ ಕುಮಾರ್ ಬಿ.ಜಿ ಬಿಜೆಪಿ 2 ನಾಮಪತ್ರ, ಮೊಹ್ಮದ್ ಕಲೀಂ ಬಹುಜನ ಸಮಾಜ ಪಾರ್ಟಿ, ಬಿ.ರಾಜಶೇಖರ್, ಬರ್ಕಾತ್ ಅಲಿ ಪಕ್ಷೇತರ  ಸೇರಿ 18 ನಾಮಪತ್ರಗಳು.

108.ಮಾಯಕೊಂಡ ಪ.ಜಾತಿ ಮೀಸಲು ಕ್ಷೇತ್ರ:  ಎಂ.ಬಸವರಾಜ ನಾಯ್ಕ ಬಿಜೆಪಿ, ಎನ್.ಶಾಂತಬಾಯಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ, ಚೇತನ್‍ಕುಮಾರ್ ನಾಯ್ಕ ಉತ್ತಮ ಪ್ರಜಾಕೀಯ ಪಾರ್ಟಿ, ವಾಗೀಶ ಬಿ.ಎಂ, ಎ.ಕೆ.ಗಣೇಶ, ಶಿವಪ್ರಕಾಶ್ ಆರ್.ಎಲ್, ಪಿ.ಆರ್.ಶ್ರೀನಿವಾಸ್, ಮಂಜುನಾಥ ಎ.ಕೆ. ಪಕ್ಷೇತರ ಸೇರಿ 23 ನಾಮಪತ್ರಗಳು.

109.ಚನ್ನಗಿರಿ ಕ್ಷೇತ್ರ: ಹೆಚ್.ಎಸ್.ಶಿವಕುಮಾರ್ ಬಿಜೆಪಿ, ಬಸವರಾಜು ವಿ.ಶಿವಗಂಗ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್, ಚಂದ್ರಪ್ಪ.ವಿ ಪಕ್ಷೇತರ ಸೇರಿ 12 ನಾಮಪತ್ರಗಳು.

110.ಹೊನ್ನಾಳಿ ಕ್ಷೇತ್ರ: ಎ.ಕೆ.ಹನುಮಂತಪ್ಪ ಕರ್ನಾಟಕ ರಾಷ್ಟ್ರ ಸಮಿತಿಯಿಂದ ನಾಮಪತ್ರ ಸಲ್ಲಿಸಿದ್ದು ಇದುವರೆಗೆ 7 ನಾಮಪತ್ರಗಳು ಸಲ್ಲಿಕೆಯಾಗಿವೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!