ಬಿಜೆಪಿಯಿಂದ ದಾವಣಗೆರೆ ಜಿಲ್ಲೆಯ ಚುನಾವಣಾ ಪ್ರಭಾರಿಗಳ ನೇಮಕ

ಚುನಾವಣಾ ಪ್ರಭಾರಿಗಳ ನೇಮಕ
ದಾವಣಗೆರೆ : ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳನ್ನಾಗಿ ಈ ಕೆಳಕಂಡವರನ್ನು ನೇಮಿಸಲಾಗಿದೆ.
ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಶಿವಕುಮಾರ್ ಅವರಿಗೆ ಜಗಳೂರು (ಎಸ್ಟಿ)ಕ್ಷೇತ್ರದ ಜವಾಬ್ದಾರಿ, ಮಾಜಿ ಜಿಲ್ಲಾಧ್ಯಕ್ಷ ಅಣಬೇರು ಜೀವನಮೂರ್ತಿ ಅವರಿಗೆ ಹರಿಹರ, ಮಾಜಿ ಪ್ರಧಾನ ಕಾಯದರ್ಶಿ ಹೆಚ್.ಎಂ.ಶಿವಕುಮಾರ್ ಅವರಿಗೆ ದಾವಣಗೆರೆ ಉತ್ತರ, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಅವರಿಗೆ ದಾವಣಗೆರೆ ದಕ್ಷಿಣ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ್ ಅವರಿಗೆ ಮಾಯಕೊಂಡ (ಎಸ್ಸಿ), ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೇಬಾಳು ಅವರಿಗೆ ಚನ್ನಗಿರಿ ಹಾಗೂ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಅವರಿಗೆ ಹೊನ್ನಾಳಿ ಕ್ಷೇತ್ರದ ಚುನಾವಣಾ ಪ್ರಭಾರಿಗಳಾಗಿ ನೇಮಿಸಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಆದೇಶಿಸಿದ್ದಾರೆ.