ಗೋ ಹತ್ಯೆ ನಿಷೇದ, ಮತಾಂತರ ತಡೆ, ಪಠ್ಯದಲ್ಲಿ ಕೆಲ ಪಾಠಗಳನ್ನು ಕೈ ಬಿಡುವ ವಿಚಾರ ತಿರಸ್ಕರಿಸಲು ದಾವಣಗೆರೆ ಶ್ರೀರಾಮಸೇನೆ ಒತ್ತಾಯ

ದಾವಣಗೆರೆ : ಗೋ ಹತ್ಯೆ ನಿಷೇಧ ಮತಾಂತರ ನಿಷೇಧ ಹಿಂಪಡೆಯುವ ಹಾಗೂ ಪಠ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ , ಸಮಾಜ ಸುಧಾರಕಾರ ಕೈ ಬಿಡುವ ರಾಜ್ಯ ಸರ್ಕಾರದ ಪ್ರಸ್ತಾಪ ತಿರಸ್ಕರಿಸಲು ವಿನಂತಿಸಿ ಶ್ರೀರಾಮ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.
ಗೋ ಹತ್ಯಾ ನಿಷೇಧಕ್ಕೆ ಸಂಬಂಧಿಸಿದಂತರ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಜನರ ಮಠಾಧಿಶರ, ಸಂಘಟನೆಗಳ ಹೋರಾಟ ಹಾಗೂ ಸಂವಿಧಾನದ ಮೂಲಕ ಅಸರೆಯಾದ ರೈತರ ಬೆನ್ನೆಲುಬು,ದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ,ಆರೋಗ್ಯ, ಕೃಷಿ ಮುಂತಾದವುಗಳಿಗೆ ಆಧಾರ ಸ್ಥಂಭ ಗೋ ವಂಶವಾಗಿದ್ದು ಅದರ ರಕ್ಷಣೆ,ಪೋಷಣೆ ಸರ್ಕಾರದ ಆದ್ಯ ಕರ್ತವ್ಯ ಎಂದು ಅರಿತು ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತಂದಿತ್ತು. ಆದರೆ ಪ್ರಸಕ್ತ ಕಾಂಗ್ರೆಸ್ ಸರ್ಕಾರ ಅದನ್ನು ವಾಪಸ್ ಪಡೆಯಲು ನಿರ್ಧರಿಸಿದ್ದು ಅಕ್ಷಮ್ಯ ಎಂದು ಶ್ರೀರಾಮ ಸೇನೆಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ
ಮತಾಂತರ ಮಹಾ ಪಿಡುಗು. ದೇಶದ ಸಾಂಸ್ಕೃತಿಕ,ಭೌಗೊಳಿಕ, ಜನಸಂಖ್ಯೆ ಮುಂತಾದ ಅಸಮತೋಲನ ಜೊತೆಗೆ ಸಂಘರ್ಷಕ್ಕೂ ಮತಾಂತರ ಕಾರಣಿಭೂತವಾಗಿದ್ದು ಅದಕ್ಕೆ ನಾಡಿನ ಎಲ್ಲ ಸಮಾಜ, ಸಮುದಾಯಗಳ, ಸಂವಿಧಾನದ ಆಶಯದಂತೆ ಜಾರಿಗೆ ತಂದ ಮಸೂದೆಯನ್ನು ಪ್ರಸಕ್ತ ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಲು ಯತ್ನಿಸುತ್ತಿದೆ.
ಅಲ್ಲದೆ. ಪಠ್ಯ ಪುಸ್ತಕದಲ್ಲಿ ದೇಶಭಕ್ತರ,ಸ್ವಾತಂತ್ರ ಹೋರಾಟಗಾರರ,ಸಮಾಜ ಸುಧಾರಕರ ಪಠ್ಯ ಕೈಬಿಡುವ ನಿರ್ಧಾರ ದೇಶ ಕ್ಕಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಮಾಡಿದ ಘೋರ ಅಪಮಾನವಾಗಿದೆ.ಅದ್ದರಿಂದ ರಾಜ್ಯ ಸರ್ಕಾರದ ಈ ಮೂರು ಪ್ರಸ್ತಾವನೆಗೆ ನಮ್ಮ ಪ್ರಬಲ ವಿರೋಧವಿದ್ದು ತಾವು ತಕ್ಷಣ ಮಧ್ಯ ಪ್ರವೇಶಿಸಿ ಈ ಪ್ರಸ್ತಾವನೆಗಳನ್ನು ತಿರಸ್ಕರಿಸಬೇಕೆಂದು ಶ್ರೀರಾಮ ಸೇನೆ ರಾಜ್ಯಪಾಲರನ್ನು ಒತ್ತಾಯಿಸಿದೆ.
ಶ್ರೀ ರಾಮ ಸೇನಾ ಜಿಲ್ಲಾಧ್ಯಕ್ಷ ಮಣಿ ಸರ್ಕಾರ, ಪದಾಧಿಕಾರಿಗಳಾದ ಸಾಗರ್, ಆಲೂರು ರಾಜಶೇಖರ್, ಶ್ರೀಧರ್ ಎಮ್., ವಿನೋದ್, ರಾಹುಲ್, ರಮೇಶ್ ಶಿಬಾರ, ರಾಜು ದೊಡ್ಡಮನಿ, ವಿನಯ್ ಆರ್ ಎ., ಶ್ರೀಧರ್, ರಘು ಇತರ ಪದದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.